ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಿ : ಉಮಾಭಾರತಿ

Social Share

ಭೂಪಾಲ್,ಫೆ.1- ಮಧ್ಯಪ್ರದೇಶದಲ್ಲಿರುವ ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸುವಂತೆ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಒತ್ತಾಯಿಸಿದ್ದಾರೆ. ಪುರುಷರ ಮದ್ಯ ಸೇವನೆಯಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಉಮಾ ಭಾರತಿ ಅವರು ಸರ್ಕಾರಕ್ಕೆ ಈ ಸಲಹೆ ನೀಡಿದ್ದಾರೆ.

ಆಯೋಧ್ಯಾ ನಗರದ ಮದ್ಯದಂಗಡಿ ಸಮೀಪವಿರುವ ದೇವಾಲಯವೊಂದರಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಡಾರ ಹೂಡಿರುವ ಅವರು ಸರ್ಕಾರದ ಹೊಸ ಮದ್ಯ ನೀತಿ ಘೋಷಣೆಗಾಗಿ ಕಾಯುತ್ತಿದ್ದಾರೆ.

ಭಾರತದ ಜೆಟ್ ಎಂಜಿನ್ ತಯಾರಿಕೆಗೆ ಅಮೆರಿಕ ಸಹಕಾರ

ಸರ್ಕಾರ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಮಧುಶಾಲಾ ಮೇ ಗೋಶಾಲಾ ಆರಂಭಿಸುವಂತೆ ಚಳವಳಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

cow, sheds, liquor, shops, Uma Bharti,

Articles You Might Like

Share This Article