ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕೆ..!

Yogishwar--01

ಚನ್ನಪಟ್ಟಣ, ಜೂ.27- ಈ ಬಾರಿಯ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷದ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದ್ದು, ರಾಮನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಬರೋಬ್ಬರಿ 20 ಸಾವಿರ ಮತಗಳಿಂದ ಸೋಲನ್ನು ಅನುಭವಿಸಿದ್ದರು.

ಎಚ್.ಡಿ.ಕುಮಾರಸ್ವಾಮಿ ಯವರು ಚನ್ನಪಟ್ಟಣ ಮತ್ತು ರಾಮನಗರ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ ಪರಿಣಾಮ ರಾಮನಗರಕ್ಕೆ ರಾಜೀನಾಮೆ ನೀಡಿದ್ದು, ಅಲ್ಲಿ ಮತ್ತೊಮ್ಮೆ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿರುವ ಪರಿಣಾಮ ರಾಮನಗರದಲ್ಲಿ ಜೆಡಿಎಸ್ ಪಕ್ಷದಿಂದ ಅನಿತಾಕುಮಾರ ಸ್ವಾಮಿ ಹಾಗೂ ನಿಖಿಲ್‍ಗೌಡರವರ ಹೆಸರು ಕೇಳಿ ಬರುತ್ತಿದೆ. ಆದರೆ ಜೆಡಿಎಸ್ ಪಕ್ಷದಿಂದ ಯಾರೇ ನಿಂತರೂ ಗೆಲುವು ಕಟ್ಟಿಟ್ಟ ಬುತ್ತಿ. ಆದಕ್ಕಿಂತ ಹೆಚ್ಚಿನದಾಗಿ ರಾಮನಗರದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎನ್ನಬಹುದು.

ಪಕ್ಷ ಒಪ್ಪಿದರೆ ಬಿಜೆಪಿ ಅಭ್ಯರ್ಥಿಯಾಗಿ ನಾನು ರಾಮನಗರಕ್ಕೆ ಅಭ್ಯರ್ಥಿಯಾಗಲು ಸಿದ್ದ ಎಂದು ಮೇಲ್ನೋಟಕ್ಕೆ ಹೇಳಿದ್ದ ಸಿ.ಪಿ.ಯೋಗೇಶ್ವರ್‍ಗೆ ರಾಮನಗರದ ರಾಜಕೀಯದ ಮರ್ಮವನ್ನು ಅರಿತಿರುವ ಅವರು ರಾಮನಗರದಲ್ಲಿ ಸ್ಪರ್ಧಿಸಿದರೆ ಚನ್ನಪಟ್ಟಣದಲ್ಲಿ ಸೋಲನ್ನು ಅನುಭವಿಸಿದಂತೆ ರಾಮನಗರದಲ್ಲೂ ಸೋಲಬೇಕಾಗುತ್ತದೆ ಎಂದು ತಿಳಿದು ಲೋಕಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿಯಾಗಿ ಟಿಕೇಟ್‍ಗಾಗಿ ಹೈಕಮಾಂಡ್‍ನ ನಿಕಟ ಸಂಪರ್ಕವನ್ನು ಹೊಂದಿ ಲೋಕಸಭಾ ಚುನಾವಣೆಗೆ ಟಿಕೇಟ್‍ಗಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವೇ ತಿಂಗಳುಗಳ ಬಾಕಿ ಇರುವ ಪರಿಣಾಮ ಪಕ್ಷ ಸಂಘಟನೆಗೆ ಮುಂದಾಗಲಿ ಎಂಬ ಉದ್ದೇಶದಿಂದ ಎರಡು ಪಕ್ಷಗಳಿಗೂ ಸೆಡ್ಡು ಹೊಡೆದಂತೆ ಮುಂಚಿತವಾಗಿಯೇ ಸಂಭಾವ್ಯ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಈಗಿನಿಂದಲೇ ಗೆಲುವಿಗೆ ಶ್ರಮ ವಹಿಸಲಿ ಎನ್ನುವ ಆಲೋಚನೆಯಲ್ಲಿ ಇದ್ದಾರೆ ಎನ್ನಬಹುದು.

Sri Raghav

Admin