ಕೇರಳದಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಕಗ್ಗೊಲೆ

Social Share

ಕಣ್ಣೂರು(ಕೇರಳ),ಫೆ.21- ಇಂದು ನಸುಕಿನ ಜಾವ ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ವೃತ್ತಿಯಲ್ಲಿ ಮೀನುಗಾರರಾಗಿರುವ ಹರಿದಾಸನ್ ಅವರನ್ನು ನ್ಯೂ ಮಾಹೆ ಸಮೀಪದ ಪುನ್ನೋಲ್‍ನಲ್ಲಿರುವ ಅವರ ಮನೆ ಎದುರು ನಸುಕಿನ ಜಾವ 1.30ರಲ್ಲಿ ಹೊರಗೆಳೆದು ದುಷ್ಕರ್ಮಿಗಳ ಗುಂಪೊಂದು ಕೊಚ್ಚಿ ಕೊಲೆಗೈದಿದೆ ಎಂದು ಆಪಾದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹರಿದಾಸನ್ ಹತ್ಯೆಗೀಡಾಗಿದ್ದಾರೆ. ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ನೆರೆ ಹೊರೆಯವರು 54 ವರ್ಷದ ಕಣ್ಣದಾಸನ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಅಲ್ಲಿಗೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ನುಡಿದಿದ್ದಾರೆ.
ವಾರದ ಹಿಂದೆ ಪುನ್ನೋಲ್ ಪ್ರದೇಶದಲ್ಲಿ ಸಿಪಿಐ(ಎಂ) ಮತ್ತು ಬಿಜೆಪಿ ನಡುವೆ ಘರ್ಷಣೆ ಉಂಟಾಗಿತ್ತು ಎಂದು ಪೊಲೀಸರು ಅರುಹಿದ್ದಾರೆ.

Articles You Might Like

Share This Article