CPM ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ RSS ಕಾರ್ಯಕರ್ತರು ಖುಲಾಸೆ

Social Share

ಕೊಚ್ಚಿ, ಜು.13- ಕೇರಳದ ತಿರುವನಂತಪುರದಲ್ಲಿ 2008ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 13 ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರನ್ನೊಳಗೊಂಡ ಪೀಠವು ಅಂಗೀಕರಿಸಿತ್ತು.

ಕೇರಳದ ರಾಜಕೀಯ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯ ಆತಂಕವ್ಯಕ್ತ ಪಡಿಸಿದೆ. ಪೈಪೋಟಿ, ಒಳಸಂಚು, ದ್ವೇಷ ಮತ್ತು ವಂಚನೆಯಿಂದ ಕುದಿಯುತ್ತಿರುವ ಕಡಾಯಿಯಾಗಿರುವ ರಾಜಕೀಯ ಆಗಾಗ್ಗೆ ರಕ್ತಪಾತದ ರೂಪದಲ್ಲಿ ದ್ವೇಷದ ವಿಷವನ್ನು ಹೊರಹಾಕುತ್ತದೆ ಎಂದು ಆಕ್ಷೇಪಿಸಿದೆ.

ಈ ನ್ಯಾಯಾಲಯದ ಮುಂದೆ ಚಿತ್ರಿಸಲಾದ ದೃಶ್ಯಗಳ ಪ್ರಕಾರ, ಬೋಧಕ ಸಾಕ್ಷ್ಯಗಳು ಮತ್ತು ಸಂಗ್ರಹಿತ ಪುರಾವೆಗಳು ಒಟ್ಟಾರೆಯಾಗಿ ಚಿತ್ರಿತ ಕತೆಗಳಾಗಿವೆ. ರಾಜಕೀಯ ದ್ವೇಷದ ವಿಷಾದಕರ ಸಾಹಸಗಾಥೆಯ ಮೂಲಕ ಬುದ್ದಿಹೀನ ಕೊಲೆಗಳನ್ನು ಹಲವು ಪ್ರಕರಣಗಳಲ್ಲಿ ಕಂಡಿದ್ದೇವೆ. ರಾಜ್ಯದ ಸಾಮಾಜಿಕ ವ್ಯವಸ್ಥೆ ಕಣ್ಣೀರಾಗಿದೆ ಎಂದು ನ್ಯಾಯಮೂರ್ತಿಗಳು ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಈ ರೀತಿಯ ಕೊಲೆಗಳು ವಾರ್ಷಿಕ ಸ್ಮರಣೆಗಳಲ್ಲಿ ಪೈಪೋಟಿಯ ಬೆಂಕಿಯನ್ನು ಉಲ್ಬಣಿಸುತ್ತವೆಯೇ ಹೊರತು, ದುಃಖಿತರ ಕಣ್ಣೀರನ್ನು ಒರೆಸುವುದಿಲ್ಲ ಅಥವಾ ಆರೋಪಿಗಳ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವುದಿಲ್ಲ. ಈ ಪ್ರಕರಣದಿಂದ ಮತ್ತೊಂದು ಜೀವ ಹೋಗಿದೆ, ಕಾನೂನು ಮತ್ತೊಮ್ಮೆ ವಿಫಲವಾಗಿದೆ. ಎರಡು ವಿಷಯಗಳು ದಾರಿಯ ಇಕ್ಕೆಲಗಳಲ್ಲಿ ಬಿದ್ದಿವೆ.

ಸಮಾಜ ಎಲ್ಲದರ ನಿರರ್ಥಕತೆಯ ಕಠೋರ ವಿಜ್ಞಾಪನೆಗಳನ್ನು ಕಂಡಿದೆ. ಆರೋಪಿಗಳನ್ನು ಖುಲಾಸೆಗೊಳಿಸಲು ನಮಗೆ ಆಸಕ್ತಿ ಇಲ್ಲ. ಆದರೆ ಅಭಿಯೋಜನೆ ಆರೋಪಿಗಳ ಮೇಲಿನ ದೋಷವನ್ನು ಸಾಬೀತು ಪಡಿಸಲು ಮತ್ತೊಮ್ಮೆ ಶೋಚನೀಯವಾಗಿ ವಿಫಲವಾಗಿದೆ ಎಂದು ನ್ಯಾಯಾೀಧಿಶರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಆರೋಪ ಸಾಬೀತು ಪಡಿಸುವ ಯಾವುದೇ ಬಲವಾದ ಪುರಾವೆಗಳಿಲ್ಲ ಮತ್ತು ಪ್ರಾಷಿಕ್ಯೂಷನ್ ಸಮರ್ಥನೀಯವಾದ ವಾದ ಮಂಡಿಸಲು ವಿಫಲವಾಗಿದೆ. ಆದರೆ ಎರಡು ಗುಂಪುಗಳ ರಾಜಕೀಯ ಪೈಪೋಟಿ ಉಳಿದಿದೆ ಎಂದು ನ್ಯಾಯಾಲಯ ಹೇಳಿದೆ.

2018ರ ಏಪ್ರಿಲ್ 1ರಂದು ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತ ವಿ.ವಿ.ವಿಷ್ಣು ಹತ್ಯೆಗೆ ಸಂಬಂಸಿದಂತೆ ತಿರುವನಂತಪುರಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಹದಿಮೂರು ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಲ್ಲದೆ, ದ್ವಿಪಟ್ಟು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈಗ ಹೈಕೋರ್ಟ್ ಆರೋಪಿಗಳ ಶಿಕ್ಷೆಯನ್ನು ಖುಲಾಸೆ ಮಾಡಿದೆ.

Articles You Might Like

Share This Article