ಬೆಂಗಳೂರು, ಫೆ. 28- ಸ್ಯಾಂಡಲ್‍ವುಡ್‍ನ ಪ್ರಿನ್ಸಿಪಾಲ್ ಎಂದೇ ಖ್ಯಾತರಾಗಿರುವ ಕೇಜ್ರಿಸ್ಟಾರ್ ರವಿಚಂದ್ರನ್‍ರ ತಾಯಿ ಪಟ್ಟಮ್ಮಾಳ್ ವೀರಾಸ್ವಾಮಿ (83) ಅವರು ಇಂದು ಬೆಳಗ್ಗೆ 6.30ರಲ್ಲಿ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ 10 ವರ್ಷಗಳಿಂದ ಪಟ್ಟಮ್ಮಾಳ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಕೇಜ್ರಿಸ್ಟಾರ್ ರವಿಚಂದ್ರನ್, ಬಾಲಾಜಿ ಸೇರಿದಂತೆ ಐವರು ಮಕ್ಕಳನ್ನು ಅಗಲಿದ್ದಾರೆ.
ಅಲ್‍ಜೈಮರ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರು ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ಕೆಲವು ಸಂದರ್ಶನದಲ್ಲಿ ರವಿಚಂದ್ರನ್ ತಮ್ಮ ತಾಯಿ ಸ್ಥಿತಿಯನ್ನು ನೆನೆದು ಭಾವುಕರಾಗಿದ್ದರು. ನೆನಪಿನ ಶಕ್ತಿ ಕಳೆದುಕೊಂಡಿದ್ದರು.
ನನ್ನನ್ನು ಮಾತ್ರ ಗುರುತಿಸುತ್ತಾರೆ ಎಂದು ರವಿಚಂದ್ರನ್ ಅವರು ಹಲವು ಕಾರ್ಯಕ್ರಮಗಳು ಹಾಗೂ ರಿಯಾಲ್ಟಿ ಶೋನಲ್ಲಿ ಹೇಳಿಕೊಂಡು ತಮ್ಮ ದುಃಖವನ್ನು ಹಂಚಿಕೊಂಡಿದ್ದರು.
ರವಿಚಂದ್ರನ್ ಅವರ ತಾಯಿಯ ಅಂತ್ಯಕ್ರಿಯೆ ಸಂಜೆ ಹರಿಶ್ಚಂದ್ರಘಾಟ್‍ನಲ್ಲಿ ನೆರವೇರಲಿದೆ. ಪಟ್ಟಮ್ಮಾಳ್ ವೀರಾಸ್ವಾಮಿ ಅವರ ನಿಧನಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಕೆ.ಜಯರಾಜ್, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಎಸ್.ಎ.ಚಿನ್ನೇಗೌಡ, ನಟರುಗಳಾದ ಶಿವರಾಜ್‍ಕುಮಾರ್, ಜಗ್ಗೇಶ್, ಸುದೀಪ್, ದರ್ಶನ್, ಯಶ್, ಗಣೇಶ್ ಸೇರಿದಂತೆ ಹಲವರು ಸಿನಿಮಾ ಹಾಗೂ ಕಿರುತೆರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
