ಮುಂಬೈ,ಜ.22- ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರು ನಾಗ್ಪುರದಲ್ಲಿ ಜಮೀನು ಖರೀದಿಸಲು ಹೋಗಿ ತನ್ನ ಸ್ನೇಹಿತನಿಂದಲೇ ವಂಚನೆಗೊಳಗಾಗಿದ್ದಾರೆ.
ಈ ಸಂಬಂಧ ಶೈಲೇಸ್ ಠಾಕ್ರೆ ಎಂಬುವವರ ಮೇಲೆ ಉಮೇಶ್ ಯಾದವ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ 2014 ಜುಲೈ 15ರಂದು ಉಮೇಶ್ ಯಾದವ್ ಭಾರತ ತಂಡಕ್ಕೆ ಆಯ್ಕೆಯಾದ ನಂತರ ನಿರುದ್ಯೋಗಿಯಾಗಿದ್ದ ತನ್ನ ಸ್ನೇಹಿತ ಠಾಕ್ರೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಲಕ್ರಮೇಣ ಉಮೇಶ್ ಯಾದವ್ ಅವರ ವಿಶ್ವಾಸಗಳಿಸಿದ್ದು, ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸಲು ಪ್ರಾರಂಭಿಸಿದ್ದು, ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ಶೈಲೇಸ್ ಠಾಕ್ರೆ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್ಬಿಐ ಶೋಧ ದಾಖಲೆಗಳ ವಶ
ನಾಗ್ಪುರದಲ್ಲಿ ಒಂದು ಖಾಲಿ ಜಮೀನು ಮಾರಾಟಕ್ಕಿದ್ದು, 44 ಲಕ್ಷ ರೂ.ಗೆ ಸಿಗುತ್ತದೆ ಎಂದು ಉಮೇಶ್ ಯಾದವ್ ಅವರಿಗೆ ತಿಳಿಸಿದ್ದು, ಅವರ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ನಂತರ ಶೈಲೇಶ್ ಠಾಕ್ರೆ ನಿವೇಶನವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ. ಬಳಿಕ ನಿವೇಶನ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಹೀಗಾಗಿ ಉಮೇಶ್ ಯಾದವ್ ವಂಚನೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
cricketer, Umesh Yadav, Friend, manager, buying property,