ಪತ್ನಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟರ್ ವಿನೋದ್ ಕಾಂಬ್ಳಿ

Social Share

ಮುಂಬೈ,ಫೆ.5- ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ಅವರು ಪತ್ನಿ ಆಂಡ್ರಿಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ಆಂಡ್ರಿಯಾ ಪೊಲೀಸರಿಗೆ ದೂರು ನೀಡಿದ್ದು, ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಕಾಂಬ್ಳಿ ನನ್ನ ಮೇಲೆ ಅಡುಗೆ ಪ್ಯಾನ್ ಎಸೆದರು ಅದರಿಂದ ನನ್ನ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಆಂಡ್ರಿಯಾ ದೂರು ನೀಡಿದ್ದಾರೆ. ಆದರೆ, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಬಾಂದ್ರಾ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಅಂಗಳ ತಲುಪುತ್ತಿರುವ ಕಾಂಗ್ರೆಸ್‍ನ ಒಳ ಬೇಗುದಿಗಳು

ಕುಡಿದ ಮತ್ತಿನಲ್ಲಿ ಆಂಡ್ರಿಯಾ ಅವರ ಪ್ಲಾಟ್‍ಗೆ ಏಕಾಏಕಿ ನುಗ್ಗಿದ ಕಾಂಬ್ಳಿ ಪತ್ನಿಯನ್ನು ನಿಂದಿಸಲಾರಂಭಿಸಿದರು. ಈ ಸಂದರ್ಭದಲ್ಲಿ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ. ಈ ಘಟನೆ ನಡೆದಿರುವುದು ಕಳೆದ ಶುಕ್ರವಾರವಾದರೂ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

32ನೇ ವರ್ಷಕ್ಕೆ ಕಾಲಿಟ್ಟ `ಈ ಸಂಜೆ’ ಪತ್ರಿಕೆ

ಪತ್ನಿ ಮೇಲೆ ಕಾಂಬ್ಳಿ ಹಲ್ಲೆ ನಡೆಸುವ ಸಂದರ್ಭದಲ್ಲಿ ಅವರ 12 ವರ್ಷದ ಮಗ ಸ್ಥಳದಲ್ಲೇ ಇದ್ದ ಎನ್ನಲಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Cricketer, Vinod Kambli, booked, assaulting wife,

Articles You Might Like

Share This Article