ಬೆಂಗಳೂರಲ್ಲಿ ಕ್ರೈಂ ರೇಟ್ ಹೇಗಿದೆ..? ಕಮಿಷನರ್ ಪ್ರತಾಪ್ ರೆಡ್ಡಿ ಹೇಳೋದೇನು..?

Social Share

ಬೆಂಗಳೂರು, ಜ.4- ನಗರದಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣದಲ್ಲಿವೆ. 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ 9962 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 9281 ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿವರಿಸಿದರು.

ನಗರದಲ್ಲಿ ಒಟ್ಟಾರೆಯಾಗಿ 2022ರಲ್ಲಿ 28518 ಐಪಿಸಿ ಪ್ರಕರಣಗಳು ದಾಖಲಾಗಿರುತ್ತವೆ. ಈ ಪ್ರಕರಣಗಳನ್ನು ಕಳೆದ ಮೂರು ವರ್ಷಗಳಿಗೆ ಹೋಲಿಸಿದಾಗ ಗಮನಾರ್ಹವಾಗಿ ಏರಿಕೆಯಾಗಿಲ್ಲ. 2021ನೇ ಸಾಲಿನಲ್ಲಿ ಕೋವಿಡ್ ನಿಮಿತ್ತ ಲಾಕ್‍ಡೌನ್, ರಾತ್ರಿ ಸಂಚಾರ ನಿಷೇಧ ಇದ್ದುದ್ದರಿಂದ ಪ್ರಕರಣ ಕಡಿಮೆ ವರದಿಯಾಗಿರುತ್ತದೆ ಎಂದರು.

ಪ್ರಮುಖ ಅಪರಾಧ ಪ್ರಕರಣಗಳಾದ ಕೊಲೆ, ಸುಲಿಗೆ, ಡಕಾಯಿತಿ, ಸರ ಅಪಹರಣ, ಮನೆ ಕಳವು, ವಾಹನ ಕಳವು ಮತ್ತಿತರ ಪ್ರಕರಣಗಳು ಇಳಿಕೆಯಾಗಿರುತ್ತವೆ. ಕೊಲೆ ಪ್ರಕರಣಗಳ ವಿಶ್ಲೇಷಣೆ ಮಾಡಿದಾಗ ಹೆಚ್ಚಿನ ಪ್ರಕರಣಗಳು ವೈಯಕ್ತಿಕ, ಕೌಟುಂಬಿಕ, ಆಸ್ತಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂಭವಿಸಿರುತ್ತವೆ. ಒಟ್ಟಾರೆಯಾಗಿ ಕೊಲೆ ಪ್ರಕರಣದಲ್ಲಿ 17 ಲಾಭಕ್ಕಾಗಿ ಕೊಲೆ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದರು.

ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಸೈಬರ್ ಅಪರಾಧಗಳ 9939 ಪ್ರಕರಣಗಳು ದಾಖಲಾಗಿದ್ದು, 2019ಕ್ಕೆ ಹೋಲಿಸಿದರೆ ಇಳಿಮುಖವಾಗಿರುತ್ತವೆ. ಶೇ. 41ರಷ್ಟು ಡಕಾಯಿತಿ, ಶೇ. 6ರಷ್ಟು ಸುಲಿಗೆ, ಶೇ. 33 ಸರ ಅಪಹರಣ, ಮನೆ ಕನ್ನ ಕಳವು ಪ್ರಕರಣಗಳು ಶೇ. 31ರಷ್ಟು ಇಳಿಕೆಯಾಗಿರುತ್ತವೆ.

ವಿದೇಶಿಯರ ವಿರುದ್ಧ ಕ್ರಮ:
ನಗರದಲ್ಲಿ ಅನಧಿಕೃತವಾಗಿ ನೆಲೆಸಿದ್ದ ಸುಮಾರು 600 ಮಂದಿ ವಿದೇಶಿಗರ ಪೈಕಿ 34 ವಿದೇಶಿಯರನ್ನು ಪತ್ತೆ ಮಾಡಿ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಸುಮಾರು 50 ವಿದೇಶಿಗರನ್ನು ಡಿಟೆನ್ಷನ್ ಸೆಂಟರ್‍ನಲ್ಲಿ ಇರಿಸಲಾಗಿದೆ. ಶೀಘ್ರದಲ್ಲಿ ಅವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪತ್ತೆಗೆ ತಂತ್ರಜ್ಞಾನ ಬಳಕೆ:
ನಗರ ಪೆಪೊಲೀಸರು ಪ್ರಕರಣದ ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳಿಗೆ ಒತ್ತು ಕೊಟ್ಟು ತನಿಖೆ ಕೈಗೊಳ್ಳುತ್ತಿದ್ದಾರೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಒಟ್ಟು 169 ಬೆರಳು ಮುದ್ರೆಗಳು ಪತ್ತೆಯಾಗಿರುತ್ತವೆ. ಇದರಲ್ಲಿ 19 ವಾರಸುದಾರರಿಲ್ಲದ ಶವಗಳ ಗುರುತು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿರುತ್ತದೆ. 2021ನೇ ಸಾಲಿನ 40 ಕಳವು ಪ್ರಕರಣಗಳನ್ನು ಸಹ ಪತ್ತೆಹಚ್ಚಲಾಗಿರುತ್ತದೆ ಎಂದು ಅವರು ಹೇಳಿದರು.

ನಗರ ಪೊಲೀಸರು ನೆಟ್‍ವರ್ಕ್ ಸಿಸ್ಟಮ್ ಬಳಸಿ ಯಶವಂತಪುರ ಪೊಲೀಸರು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪ್ರಕರಣಕ್ಕೆ ಬೇಕಾಗಿದ್ದ 12 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು, ರಾಜಗೋಪಾಲ ನಗರ ಪೊಲೀಸರು, ಮಂಡ್ಯದ ಕೆಆರ್‍ಎಸ್ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಕೇಂದ್ರ ಕಾರಗೃಹದ ಪೆರೋಲ್ ಮೇಲೆ ತೆರಳಿದ್ದ 9 ಜನ ಸಜಾ ಬಂದಿಗಳು ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈ ಪೈಕಿ 5 ಮಂದಿಯನ್ನು ಪತ್ತೆಹಚ್ಚಲಾಗಿದೆ.

ಸುರಕ್ಷಾ ಯೋಜನೆ:
ನಗರಕ್ಕೆ ಸೇಫ್ ಸಿಟಿ ಪ್ರಾಜೆಕ್ಟ್‍ನ ಮೊದಲ ಹಂತದಲ್ಲಿ ಈವರೆಗೆ 4100 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ 50 ಸೇಫ್ಟಿ ಐಲ್ಯಾಂಡ್, 60 ವುಮೆನ್ ಔಟ್‍ಫೋಸ್ಟ್, ನಿರ್ಭಯ ಕೇಂದ್ರಗಳು, 8 ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ರೆಸ್ಪಾನ್ಸ್ ಯುನಿಟ್ ಅನುಷ್ಠಾನ ಪ್ರಗತಿಯಲ್ಲಿದೆ.

ಮಹಿಳಾ- ಮಕ್ಕಳ ವಿರುದ್ಧದ ಅಪರಾಧ: ಒಟ್ಟು 153 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 149 ಪ್ರಕರಣಗಳಲ್ಲಿ ಪ್ರೀತಿ, ಮದುವೆ, ಲೀವಿಂಗ್ ಟುಗೆದರ್ ಮತ್ತು ಸಂತ್ರಸ್ತರ ಸಂಬಂಕರಿಂದ ಜರುಗಿದ ಪ್ರಕರಣಗಳಾಗಿರುತ್ತವೆ. ಮಹಿಳೆಯರ ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಕ್ಷಿಣೆ ಕಾಯ್ದೆ, ಫೋಕ್ಸೋ ಇತರ ಪ್ರಕರಣಗಳಲ್ಲಿ ಸುಮಾರು ಶೇ. 30ರಷ್ಟು ಏರಿಕೆ ಕಂಡಿರುತ್ತದೆ.

ರಾಹುಲ್‍ ಗಾಂಧಿ ಸ್ಪರ್ಧಿಸುವ ಕ್ಷೇತ್ರದ ಚರ್ಚೆ ಹುಟ್ಟು ಹಾಕಿದ ಭಾರತ್ ಜೋಡೋ ಯಾತ್ರೆ

ಮಾದಕ ವಸ್ತುವಿರುದ್ಧ ಕ್ರಮ:
ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಹೆಚ್ಚಿನ ಕ್ರಮ ವಹಿಸಿರುವ ಪೊಲೀಸರು 2022ರಲ್ಲಿ 579 ಡ್ರಗ್ ಪೆಡ್ಲರ್‍ಗಳ ವಿರುದ್ಧ ಪ್ರಕರಣಗಳು ದಾಖಲು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಮಾದಕ ವಸ್ತು ಸೇವನೆ ಮಾಡಿದ 3448 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಅವರು ಇದೇ ವೇಳೆ ವಿವರಿಸಿದರು.

ಈ ವರ್ಷ ಸುಮಾರು 3749 ಕೆಜಿ ಗಾಂಜಾ ಹಾಗೂ 167 ಕೆಜಿ. ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 89.53 ಕೋಟಿಗಳಷ್ಟಿರುತ್ತದೆ. ಅಲ್ಲದೆ ಮೊದಲ ಬಾರಿಗೆ ಇಬ್ಬರು ರೂಢಿಗತ ಮಾದಕ ವಸ್ತು ಮಾರಾಟದ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.

Crime cases, control, Bengaluru, Police Commissioner, Pratap Reddy,

Articles You Might Like

Share This Article