ಸ್ಯಾಂಟ್ರೋ ರವಿ ಆಸ್ತಿ ಮುಟ್ಟುಗೋಲಿಗೆ ಸಿಎಂ ಸೂಚನೆ

Social Share

ಹುಬ್ಬಳ್ಳಿ,ಜ.10- ರೌಡಿಶೀಟರ್ ಹಿನ್ನಲೆಯ ಸ್ಯಾಂಟ್ರೊ ರವಿಗೆ ಸೇರಿದ ಆಸ್ತಿಯನ್ನು ಮುಟುಗೋಲು ಹಾಕಿಕೊಳ್ಳಲು ಸೂಚನೆ ನೀಡಲಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಎಲ್ಲೆಲ್ಲಿ ಕಾನೂನು ಬಾಹಿರವಾಗಿ ಆಸ್ತಿ ಸಂಪಾದಿಸಿದ್ದಾನೋ ಅದೆಲ್ಲವನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಿಷ್ಟೇ ಸಮಯದಲ್ಲಿ ಬಂಧನವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದಷ್ಟು ಶೀಘ್ರ ಬಂಧನವಾಗಬಹುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

‘ವಿಶ್ವ ಹಿಂದಿ ದಿವಸ್’ ಆಚರಣೆ ನಿಲ್ಲಿಸುವಂತೆ ಜೆಡಿಎಸ್ ಆಗ್ರಹ

ಸ್ಯಾಂಟ್ರೊ ರವಿಯನ್ನು ರಕ್ಷಣೆ ಮಾಡಿದ್ದೇ ಕಾಂಗ್ರೆಸ್ ನಾಯಕರು. ಅವರ ಅಧಿಕಾರ ಅವಧಿಯಲ್ಲೇ ಆತ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದ. ಜೈಲಿನಲ್ಲಿದ್ದ ಆತನ ಬಿಡುಗಡೆಗೆ ಅನುವು ಮಾಡಿಕೊಟ್ಟವರ್ಯಾರು ಎಂದು ಪ್ರಶ್ನಿಸಿದರು.

ನಮ್ಮ ಅಧಿಕಾರ ಅವಧಿಯಲ್ಲಿ ಆತನ ಬಂಧನಕ್ಕೆ ನಾವು ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ಕಾನೂನು ಬಾಹಿರವಾಗಿ ತಪ್ಪು ಯಾರೇ ಮಾಡಿದರೂ ತಪ್ಪೇ. ಯಾರ ಅವಧಿಯಲ್ಲಿ ಏನು ನಡೆಯಿತು ಎಂಬುದು ಮುಖ್ಯವಾಗಬಾರದು.

ಆತನ ಮೇಲೆ ಯಾರು ಕಾನೂನು ಕ್ರಮ ಜರುಗಿಸಿದ್ದರು ಎಂಬುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಪೊಲೀಸರಿಗೆ ನಾವು ಮುಕ್ತ ಸ್ವತಂತ್ರ ನೀಡಿದ್ದೇವೆ. ಆದಷ್ಟು ಬೇಗ ಈ ಪ್ರಕ್ರಿಯೆಗಳು ಮುಗಿಯಲಿವೆ ಎಂದು ಹೇಳಿದರು. ಗುರುವಾರ ಹುಬ್ಬಳ್ಳಿಯಲ್ಲಿರುವ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸಲಿದ್ದಾರೆ. ಅವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಒಂದೇ ವಾರದಲ್ಲಿ ರಾಜ್ಯಕ್ಕೆ 2 ಬಾರಿ ಆಗಮಿಸಲಿರೋ ಮೋದಿ , ಬಿಜೆಪಿಯಲ್ಲಿ ಸಂಚಲನ

ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಕುರಿತಂತೆ ಅಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಈ ಭಾಗಕ್ಕೆ ಈ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಸಂಭವವಿದೆ ಎಂದು ಬೊಮ್ಮಾಯಿ ತಿಳಿಸಿದರು.

Criminal, Santro Ravi, properties, attached, CM Bommai,

Articles You Might Like

Share This Article