ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣ ಕುಸಿತ, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಏರಿಕೆ

Social Share

ನವದೆಹಲಿ, ಫೆ.4- ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ.30ರನ್ನು ದಾಟಿಲ್ಲ ಎಂಬ ವಿಷಾದ ಒಂದು ಕಡೆಯಾದರೆ, ಅದೇ ಸಮಯದಲ್ಲಿ ಸಾವಿರರು ಕೋರ್ಟ್‍ಗಳನ್ನು ಸ್ಥಾಪಿಸಿದರೂ ಬಾಕಿ ಪ್ರಕರಣಗಳ ಪ್ರಮಾಣ ಶೇ.95ಕ್ಕಿಂತ ಕಡಿಮೆ ಆಗಿಲ್ಲ ಎಂಬ ವಿಪರ್ಯಾಸ ಕಾಡುತ್ತಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಸ್ಥಿತಿ ಇನ್ನೂ ದುರ್ಬರವಾಗಿದೆ.
ಮಹಿಳಾ ಸುರಕ್ಷತೆ ಕುರಿತು ರಾಜ್ಯಸಭೆಯಲ್ಲಿ ಸದಸ್ಯೆ ಕನ್ನಿಮೋಳಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು, ಕಳೆದ ಐದು ವರ್ಷಗಳ ಅಂಕಿ ಅಂಶಗಳನ್ನು ಸಂಸತ್ ಮುಂದೆ ಇಟ್ಟಿದ್ದಾರೆ.
ಸಂವಿಧಾನದ ಏಳನೇ ಪರಿಚ್ಚೆಧದ ಪ್ರಕಾರ ಪೊಲೀಸ್ ಮತ್ತು ಸಾರ್ವಜನಿಕ ಆದೇಶಗಳು, ಕಾನೂನು ಸುವ್ಯವಸ್ಥೆ ರಕ್ಷಣೆ, ವಿಚಾರಣೆ, ಜೀವ ಮತ್ತು ಆಸ್ತಿ ರಕ್ಷಣೆ, ತನಿಖೆ ಮತ್ತು ಶಿಕ್ಷೆ ವಿಸುವುದು ರಾಜ್ಯಕ್ಕೆ ಸೇರಿದ ವಿಷಯಗಳಾಗಿವೆ. ರಾಜ್ಯ ಸರ್ಕಾರಗಳು ಸೂಕ್ತ ಕಾನೂನುಗಳೊಂದಿಗೆ ಅಪರಾಧ ಕೃತ್ಯಗಳನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಅಪರಾಧ ಮಾನಕ ಸಂಸ್ಥೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾಹಿತಿಯನ್ನು ಕಲೆ ಹಾಕಿತ್ತದೆ, ಈವರೆಗೂ 2020ನೇ ಸಾಲಿನವರೆಗಿನ ವರದಿಗಳು ಲಭ್ಯ ಇವೆ. ಅದರ ಪ್ರಕಾರ ಶಿಕ್ಷೆಯ ಪ್ರಮಾಣ (ಸಿವಿಆರ್) ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಶೇಕಡವಾರು (ಸಿಪಿಪಿ) ಪ್ರಮಾಣ ಗಮನೀಯವಾಗಿವೆ ಎಂದಿದ್ದಾರೆ.
ದೇಶಾದ್ಯಂತ 2016ರಲ್ಲಿ ಸಿವಿಆರ್ ಶೇ.18.9, ಸಿಪಿಪಿ ಶೇ.89.8ರಷ್ಟಿದೆ. 2017ರಲ್ಲಿ ಸಿವಿಆರ್ ಶೇ.24.6-ಸಿಪಿಪಿ 89.6, 2018ರಲ್ಲಿ ಸಿವಿಆರ್ 23.1-ಸಿಪಿಪಿ 90.7, 2019ರಲ್ಲಿ ಸಿವಿಆರ್23.2-ಸಿಪಿಪಿ 91.1, 2020ರಲ್ಲಿ ಸಿವಿಆರ್ 29.8-ಸಿಪಿಪಿ 95.5 ಎಂದು ಮಾಹಿತಿ ನೀಡಿದ್ದಾರೆ.
ಅದರಲ್ಲೂ ಕರ್ನಾಟಕದಲ್ಲಿ ದಿನೇ ದಿನೇ ಶಿಕ್ಷೆಯ ಪ್ರಮಾಣ ತಗ್ಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಶೇ.5ನ್ನು ದಾಟಿಲ್ಲ ಎಂದು ಕೇಂದ್ರ ಸಚಿವರು ನೀಡಿರುವ ಮಾಹಿತಿ ಸ್ಪಷ್ಟ ಪಡಿಸಿದೆ.
ರಾಜ್ಯದಲ್ಲಿ 2016ರಲ್ಲಿ ಶಿಕ್ಷೆಯ ಪ್ರಮಾಣ-ಸಿವಿಆರ್ ಶೇ.4.7ರಷ್ಟಿದ್ದು, 86.8ರಷ್ಟು ಪ್ರಕರಣಗಳು ಬಾಕಿ ಇದ್ದವು. 2017ರಲ್ಲಿ ಸಿವಿಆರ್ ಶೇ.5.4ರಷ್ಟಿತ್ತು, ಬಾಕಿ ಪ್ರಕರಣಗಳ ಸಂಖ್ಯೆ ಶೇ.88ರಷ್ಟು, 2018ರಲ್ಲಿ ಸಿವಿಆರ್ ಶೇ.7.7ರಷ್ಟಿದ್ದರೆ, ಬಾಕಿ ಪ್ರಕರಣಗಳು ಶೇ.88.4ರಷ್ಟಿದ್ದವು. 2019ರಲ್ಲಿ ಶಿಕ್ಷೆಯ ಪ್ರಮಾಣ ಶೇ.4.8ರಷ್ಟಿದ್ದರೆ, ಬಾಕಿ ಪ್ರಕರಣಗಳ ಸಂಖ್ಯೆ ಶೇ.87ರಷ್ಟಿತ್ತು. 2020ರಲ್ಲಿ ಬಾಕಿ ಪ್ರಕರಣಗಳು ಶೇ.4.3ರಷ್ಟಿದ್ದರೆ, ಬಾಕಿ ಪ್ರಕರಣಗಳ ಸಂಖ್ಯೆ ಶೇ.93.9ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 2018ರಲ್ಲಿ ಕ್ರಿಮಿನಲ್ ಲಾಗೆ ತಿದ್ದುಪಡಿ ತಂದು ಸಿಆರ್‍ಪಿಸಿ 173ರ ಪ್ರಕಾರ 2 ತಿಂಗಳ ಒಳಗೆ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು, ನ್ಯಾಯಾಲಯದ ಎರಡು ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ 2018ರ ಸೆಪ್ಟಂಬರ್ 20ರಲ್ಲಿ ಲೈಂಗಿಕ ಅಪರಾಧಗಳ ರಾಷ್ಟ್ರೀಯ ದತ್ತಾಂಶ ಕೇಂದ್ರ (ಎನ್‍ಡಿಎಸ್‍ಒ) ಸ್ಥಾಪನೆ ಮಾಡಿದೆ, ಇದರ ಮೂಲಕ ದೇಶಾದಂತ್ಯ ಲೈಂಗಿಕ ಅಪರಾಧಗಳ ತನಿಖೆ ಕುರಿತಂತೆ ನಿಗಾ ವಹಿಸಲಾಗುವುದು. ಜೊತೆಗೆ ಕೇಂದ್ರ ಸಚಿವಾಲಯ ಆನ್‍ಲೈನ್ ವಿಶ್ಲೇಷಣಾ ಟೂಲ್ ಅನ್ನು ಪರಿಚಯಿಸಿದೆ. ಇದು ಕಾಲ ಮಿತಿಯಲ್ಲಿ ತನಿಖೆ ನಡೆಯಬೇಕು ಎಂಬುದಕ್ಕೆ ಒತ್ತಾಸೆ ನೀಡುತ್ತಿದೆ ಎಂದಿದ್ದಾರೆ.
ತನಿಖೆಗೆ ಮತ್ತಷ್ಟು ಬಲ ನೀಡುವ ಸಲುವಾಗಿ ಡಿಎನ್‍ಎ ವಿಶ್ಲೇಷಣಾ ಘಟಕಗಳು ಮತ್ತು ರಾಜ್ಯ ಫೋರೆನ್ಸಿಕ್ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ, ಈವರೆಗೆ 23 ರಾಜ್ಯಗಳಲ್ಲಿ ಪ್ರಯೋಗಾಲಯಗಳನ್ನು ಮೇಲ್ಡರ್ಜೆಗೆ ಏರಿಸಲಾಗಿದೆ. ಚಂಡಿಗಡದಲ್ಲಿ ಕೇಂದ್ರ ಫೋರೆನ್ಸಿಕ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಲೈಂಗಿಕ ಅಪರಾಧಗಳಲ್ಲಿ ಸಾಕ್ಷ್ಯಗಳ ಸಂಗ್ರಹಕ್ಕೆ ಉತ್ಕøಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದಕ್ಕಾಗಿಯೇ ರಾಷ್ಟ್ರೀಯ ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಕಿಟ್‍ಗಳನ್ನು ರೂಪಿಸಿದೆ. ರಾಜ್ಯದ ತನಿಖಾಕಾರಿಗಳಿಗೆ ಈ ಕುರಿತು ತರಬೇತಿ ನೀಡಲಾಗಿದ್ದು, ಅವರಿಗೆ 14,950 ಕಿಟ್‍ಗಳನ್ನು ವಿತರಿಸಲಾಗಿದೆ. ಕೇಂದ್ರ ಪ್ರಾಯೋಜಿಕತ್ವದಲ್ಲಿ 1023 ತ್ವರಿತ ನ್ಯಾಯಾಲಯಗಳನ್ನು (ಎಫ್‍ಟಿಎಸ್‍ಸಿ) ಸ್ಥಾಪಿಸಲಾಗಿದೆ. ಫೋಸ್ಕೋ ಅಪರಾಧಗಳಿಗಾಗಿ ವಿಶೇಷವಾಗಿ 389 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದ್ದಾರೆ.

Articles You Might Like

Share This Article