ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

Social Share

ಬೆಂಗಳೂರು,ಜ.2- ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿರುವ ಶಾಸಕ ಅರವಿಂದ ಲಿಂಬಾವಳಿಯವರನ್ನು ರಕ್ಷಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಿಮಿನಲ್ಸ್ ಕೇರ್‍ಟೇಕರ್ ಮಿನಿಸ್ಟರ್ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಹಿಂದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾಗಿದ್ದ ಕೆ.ಎಸ್.ಈಶ್ವರ ಅವರನ್ನು ರಕ್ಷಣೆ ಮಾಡಲಾಯಿತು. ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳನ್ನು ರಕ್ಷಿಸಲಾಯಿತು.

ಈಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರನ್ನು ರಕ್ಷಿಸಲಾಗುತ್ತಿದೆ. ಈ ಮೂಲಕ ಮುಖ್ಯಮಂತ್ರಿ ಕ್ರಿಮಿನಲ್ಸ್ ಕೇರ್‍ಟೇಕರ್ ಮಿನಿಸ್ಟರ್ (ಸಿಸಿಎಂ) ಆಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್‍ನಲ್ಲಿ ಆರೋಪಿಸಿದೆ.

ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನನೋಂದು ಉದ್ಯಮಿ ಪ್ರದೀಪ್ ಕಗ್ಗಲೀಪುರದ ಬಳಿ ತಲೆಗೆ ಗುಂಡು ಹೊಡೆದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಎರಡು ಕಿಟಕಿಯ ಗಾಜುಗಳು ತೆರೆದಿವೆ. ಕಾರಿನಲ್ಲಿ ಬ್ಯಾಗ್ ಮತ್ತು ಕೆಲವು ಕಾಗದಗಳು ಕಂಡು ಬಂದಿವೆ.

ಪ್ರದೀಪ್ ಅವರ ತಲೆಯ ಬಲ ಭಾಗದಲ್ಲಿ ಗುಂಡು ನುಗ್ಗಿದೆ, ಕಾರಿನ ಎಡಭಾಗದ ಸೀಟಿನ ಮುಂದೆ ಫುಟ್‍ರೋಸ್ಟ್ ಬಳಿ ಗನ್ ಪತ್ತೆಯಾಗಿದೆ. ಸಾವಿಗೂ ಮುನ್ನಾ ಪ್ರದೀಪ್ ಪತ್ರ ಬರೆದಿದ್ದು ಬಿಜೆಪಿ ಶಾಸಕರ ಅರವಿಂದ ಲಿಂಬಾವಳಿ ಅವರು ಸೇರಿದಂತೆ ಆರು ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ.

ಈ ಮೊದಲು ಸಚಿವರಾಗಿದ್ದ ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆದಾರ ಸಂತೋಷ್ ಪಾಟೀಲ್ ಶೇ.40ರಷ್ಟು ಕಮಿಷನ್ ಆರೋಪ ಮಾಡಿ ಉಡುಪಿಯ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಸಂತೋಷ್ ಪಾಟೀಲ್ ಕುಟುಂಬದ ಸದಸ್ಯರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲಿನ್‍ಚೀಟ್ ನೀಡಲಾಗಿತ್ತು. ಈಗ ಅವರು ಮತ್ತೆ ಸಂಪುಟ ಸೇರುವ ತಯಾರಿಯಲ್ಲಿದ್ದಾರೆ.

ದಕ್ಷಿಣದಲ್ಲಿ ಕಮಲ ಅರಳಿಸಲು ಮೋದಿ, ಶಾ ಮಾಸ್ಟರ್ ಪ್ಲಾನ್

ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿರುವ ಅರವಿಂದ ಲಿಂಬಾವಳಿ ಅವರ ಹೆಸರನ್ನು ಮರಣ ಪತ್ರದಲ್ಲಿ ಉಲ್ಲೇಖಿಸಿ ಪ್ರದೀಪ್ ಸಾವನ್ನಪ್ಪಿದ್ದಾರೆ. ಲಿಂಬಾವಳಿ ರಕ್ಷಣೆಗೆ ಸರ್ಕಾರ ನಿಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

criminals, caretaker, BJP CM, Congress,

Articles You Might Like

Share This Article