“ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು CRPF ಸಂಪೂರ್ಣ ಸಿದ್ಧ”

Social Share

ಶ್ರೀನಗರ, ಮಾ.5- ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಮತ್ತು ಭಯೋತ್ಪಾದಕ ನಿಗ್ರಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಮೀಸಲು ಪೊಲೀಸ್ ಪಡೆ ಸಂಪೂರ್ಣ ಸಾಮಥ್ರ್ಯ ಹೊಂದಿದೆ ಎಂದು ಸಿಆರ್‌ಪಿಎಫ್ ಇನ್ಸ್‍ಪೆಕ್ಟರ್ ಜನರಲ್ ಎಂ.ಎಸ್.ಭಾಟಿಯಾ ತಿಳಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿ ತೀವ್ರವಾಗಿ ಸುಧಾರಿಸಿದೆ. ಭದ್ರತಾ ಪಡೆ ಜಾಗರೂಕವಾಗಿದೆ, ಅಪರಾಧ ಕೃತ್ಯಗಳ ಮೇಲೆ ನಿಗಾ ಇರಿಸಿದೆ. ಭಯೋತ್ಪಾದನೆ ನಿಗ್ರಹವನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಶಕ್ತಿ, ಸಾಮಥ್ರ್ಯ, ತರಬೇತಿ ಮತ್ತು ತಂತ್ರಜ್ಞಾನವಿದೆ, ನಮ್ಮ ಬಳಿ ಇದೆ ಎಂದು ಬಾಟಿಯಾ ಹೇಳಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ದೈನಿಕವೊಂದರಲ್ಲಿ ಕಾಶ್ಮೀರದಲ್ಲಿ ಹಂತಹಂತವಾಗಿ ಒಳನಾಡಿನ ಕಾರ್ಯಾಚರಣೆಯಿಂದ ಸೇನೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿತ್ತು, ಈ ಕುರಿತು ಪ್ರತಿಕ್ರಿಯಿಸಿರುವ ಬಾಟಿಯಾ, ಇದು ಉನ್ನತ ಮಟ್ಟದಲ್ಲಿ ನಿರ್ಧರಿಸಬೇಕಾದ ವಿಷಯವಾಗಿದೆ.

ಮತ್ತೊಂದು ಪ್ರಕರಣ : ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿನೆ

ನಾವು ಸರ್ಕಾರ ನೀಡಿದ ಆದೇಶದಂತೆ ಮುನ್ನೆಡೆಯುತ್ತೇವೆ. ಈಗಾಗಲೇ ಸಿಆರ್‍ಪಿಎಫ್ ಸೇನೆ ಮತ್ತು ಜಮ್ಮು-ಕಾಶ್ಮೀರ ಪೆÇಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಹಿಂದಿನ ರಕ್ಷಣಾ ಪಡೆಗಳು ಕಣಿವೆಯಲ್ಲಿ ಭದ್ರತೆಗೆ ಉನ್ನತ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರಿಂದ 2005 ರಲ್ಲಿನ ಕಾರ್ಯಾಚರಣೆಗೆ ಸಿಆರ್‍ಪಿಎಫ್ ಅನ್ನು ನಿಯೋಜನೆ ಮಾಡಲಾಯಿತು. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ ಎಂದು ಭಾಟಿಯಾ ಹೇಳಿದರು.

ವಿಶೇಷ ಸ್ಥಾನಮಾನ ರದ್ದತಿಗೂ ಮುನ್ನಾ ಮತ್ತು ನಂತರದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಕಳೆದ ಎರಡು-ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬುದು ಗಮನಾರ್ಹ. ಆದಾಗ್ಯೂ, ಉಗ್ರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ ಎಂದು ಹೇಳುತ್ತಿಲ್ಲ.

ಆದರೆ ಹಿಂದೆಂದಿಗಿಂತಲೂ ಕಡಿಮೆಯಾಗಿದೆ. ಭಯೋತ್ಪಾಕದ ಚಟುವಟಿಕೆಗಳ ಸಂಖ್ಯೆಗಳು ಕುಗ್ಗಿವೆ, ಉಗ್ರ ಸಂಘಟನೆಗಳ ನೇಮಕಾತಿ ಕುಗ್ಗಿದೆ, ಭಯೋತ್ಪಾದಕರ ಆಶ್ರತತಾಣಗಳು ಕಡಿಮೆಯಾಗಿವೆ.

ಕೆಲವು ದಾರಿತಪ್ಪಿದ ಯುವಕರು ಈ ಚಟುವಟಿಕೆಗಳತ್ತ ಆಕರ್ಷಿತವಾಗಬಹುದು. ಆದರೆ ಅಷ್ಟೇ ವೇಗವಾಗಿ ಅವರನ್ನು ವೇಗವಾಗಿ ಹೊರಹಾಕಲಾಗುತ್ತಿದೆ. ವಾಕ್ಚಾತುರ್ಯಕ್ಕೆ ಆಕರ್ಷಿತರಾಗಿ ಅಥವಾ ಆಮಿಷಕ್ಕೆ ಒಳಗಾಗಿ ಭಯೋತ್ಪಾದಕರಾಗುವವರ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರಿಂದಲೂ ಇಂತಹ ಕೃತ್ಯಗಳಿಗೆ ಬೆಂಬಲ ಕಡಿಮೆಯಾಗಿದೆ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆ : ಮತ್ತೋರ್ವ ಆರೋಪಿಯನ್ನು ಬಂಧಿಸಿದ NIA

ಗುಪ್ತಚರ ಜಾಲವು ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದು ಅಪರಾಗಳ ಮೇಲೆ ಕಣ್ಣಿಡಲು ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ತೀವ್ರವಾಗಿ ಸುಧಾರಿಸಿದ್ದು, ಕಲ್ಲು ತೂರಾಟ ಶೂನ್ಯಕ್ಕೆ ಇಳಿದಿದೆ. ಕಣಿವೆಯಲ್ಲಿ ಈಗ ಬಹಳಷ್ಟು ಧನಾತ್ಮಕ ಅಂಶಗಳಿವೆ.

ಸಹಜವಾಗಿ, ಆಗೊಮ್ಮೆ ಈಗೊಮ್ಮೆ ಕೆಲವು ಭಯೋತ್ಪಾದಕರನ್ನು ಕಾಣಿಸುತ್ತಾರೆ. ಅದನ್ನು ಹೆದರಿಸಲು ನಾವು ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಜೊತೆ ಸಿದ್ಧವಾಗಿದ್ದೇವೆ. ಬುಲೆಟ್-ಪ್ರೂಫ್ ವಾಹನಗಳು, ವಾಲ್-ಥ್ರೂ ರಾಡಾರ್‍ಗಳು ಮತ್ತು ಡ್ರೋನ್‍ಗಳು ಭದ್ರತಾ ಪಡೆಗಳ ಬಳಿ ಇವೆ. ಇವುಗಳಿಂದ ಭಯೋತ್ಪಾದಕರ ವಿರುದ್ಧ ಕಾರ್ಯಚರಣೆ ತೀವ್ರಗೊಳ್ಳುತ್ತಿದೆ ಎಂದು ಹೇಳಿದರು.

CRPF, role, counter, insurgency, operations, Kashmir,

Articles You Might Like

Share This Article