ಟ್ರ್ಯಾಕ್ಟರ್‌ಗೆ ಕ್ರೂಸರ್ ಡಿಕ್ಕಿ, ದಂಪತಿ ಸಾವು

Social Share

ವಿಜಯಪುರ, ಅ.27- ಕಬ್ಬು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಬಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳ್‍ಖೇಡ್ ಬಳಿಯ ಎನ್‍ಎಚ್-50ರಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಬಯ್ಯಾಜಿ ಶಿಂಧೆ (50) ಹಾಗೂ ಅವರ ಪತ್ನಿ ಸುಮಿತ್ರಾ ಶಿಂಧೆ (40) ಮೃತಪಟ್ಟ ದಂಪತಿ. ಘಟನೆಯಲ್ಲಿ 9 ಜನರಿಗೆ ಗಾಯಗಳಾಗಿದ್ದು, ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟಿ ಕಂಠ ಗಾಯನ : 1 ಕೋಟಿ 10 ಲಕ್ಷ ಜನ ನೋಂದಣಿ

ಅಥಣಿ ಮೂಲದ ಇವರೆಲ್ಲರೂ ಕ್ರೂಸರ್‍ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟೆ ಬಳಿ ಇರುವ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಎನ್‍ಎಚ್-50ರ ಧೂಳ್‍ಖೇಡ್ ಬಳಿ ಹೋಗುತ್ತಿದ್ದ ಕಬ್ಬು ತುಂಬಿದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article