ಕೆಲವರಿಂದ ಪ್ರತಿನಿತ್ಯ ಮತಾಂಧ ಟಿಪ್ಪುವಿನ ಭಜನೆ : ಸಿ.ಟಿ.ರವಿ

Social Share

ಬೆಂಗಳೂರು,ಜ.2- ಕೆಲವರಿಗೆ ಮತಾಂಧ ಟಿಪ್ಪು ಸುಲ್ತಾನ್ ದೇಶಭಕ್ತ. ಹಾಗಾಗಿ ಪ್ರತಿನಿತ್ಯ ಅವರ ಆರಾಧನೆ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಮತಾಂಧರಿಗೆ ಟಿಪ್ಪು ಸುಲ್ತಾನೇ ನಾಯಕ, ಹಾಗಾಗಿ ಅವರಿಗೆ ಟಿಪ್ಪು ಐಕಾನ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

2008, 2018 ರಲ್ಲಿ ಬಿಜೆಪಿ ಪರ ಅಲೆ ಇದ್ದರೂ ಗುರಿ ಮುಟ್ಟಲು ಆಗಿರಲಿಲ್ಲ. ಹಳೆ ಮೈಸೂರು ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಪಕ್ಷ ಯಶಸ್ವಿ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

ನಾವು ಯಾರ ಮೇಲೂ ಅವಲಂಬಿತರಾಗದೇ ಸರ್ಕಾರ ಮಾಡಲು ಅಲ್ಲಿ ಸಂಘಟನೆ ಮಾಡಬೇಕು. 2023ರಲ್ಲಿ ಗೆಲ್ಲುವ ಅತ್ಯಲ್ಪ ಅವಯಲ್ಲಿ ಪಕ್ಷ ಸಂಘಟನೆ ಮಾಡಿ ದೀರ್ಘಾವಯ ಶಾಶ್ವತ ಯೋಜನೆ ಮಾಡುತ್ತಿದ್ದೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲವಾಗಿದೆ. ಪಕ್ಷ ಬೆಳೆಸುವುದು ನಿರಂತರ ಕಾರ್ಯ. ಅದನ್ನು ನಾವು ಮಾಡುತ್ತೇವೆ. ಅದಕ್ಕೆ ಏನು ಬೇಕಾದರೂ ಹೆಸರು ಕೊಡಬಹುದು ಎಂದು ಸಮರ್ಥಿಸಿಕೊಂಡರು.

ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ

ಪ್ರಭಾವಿ ನಾಯಕರ ಸಂಪರ್ಕದಲ್ಲಿದ್ದೇವೆ, ಟಾರ್ಗೆಟ್ ಮಾಡಿ ಸಂಪರ್ಕ ಮಾಡುತ್ತೇವೆ. ನಾವು ಓಪನ್ ಆಗಿದ್ದರೆ ಹಲವು ಜನ ಬರುತ್ತಾರೆ, ರಿಸರ್ವ್ ಆಗಿದ್ದರೆ ಬರುವುದಿಲ್ಲ ಎಂದು ಹೇಳಿದರು.

BJP, CT Ravi, Congress, tipu sultan,

Articles You Might Like

Share This Article