ಬೆಂಗಳೂರು, ಫೆ.17- ಹಿಜಾಬ್ ವಿಚಾರವನ್ನು ವಿಷ್ಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಷ್ಡ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಖಂಡ ಭಾರತದ ಅಶಯ ನಮಗಿದೆ. ಅಖಂಡ ಭಾರತದದಲ್ಲಿ ತ್ರಿವರ್ಣ ಧ್ವಜ ಹಾರಬೇಕು. ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಆಗೌರವ ಕೊಟ್ಟಿದ್ದೇವೆ ಎಂದರು.
ರಾಷ್ಟ್ರಧ್ವಜ ಕೆಳಗಿಳಿಸಿ ಭಾಗವ ಧ್ವಜ ಹಾರಿಸಿದರೆ ತಪ್ಪು. ರಾಷ್ಟ್ರಧ್ವಜದ ಕೆಳಗಡೆ ಭಾಗವಧ್ವಜ ಹಾರಿಸಿದರೆ ತಪ್ಪಲ್ಲ. ಕಾಂಗ್ರೆಸ್ಗೆ ಭಾಗಧ್ವಜ ಕಂಡರೆ ಆಗೋದಿಲ್ಲವೆಂದು ಟೀಕಿಸಿದರು. ಸ್ವಾತಂತ್ರ್ಯ ಬಂದ ಮೇಲೆ ತ್ರಿವರ್ಣ ಧ್ವಜ ಬಂದಿದೆ. ನಾವು ಅದನ್ನ ಒಪ್ಪಿಕೊಂಡಿದೆ. ಸಚಿವ ಕೆ.ಎಸï. ಈಶ್ವರಪ್ಪ ಅವರು ರಾಷ್ಟ್ರ ಧ್ವಜ ತೆಗೆದು ಭಾಗವಧ್ವಜ ಹಾರಿಸುತ್ತೇವೆ ಎಂದು ಹೇಳಿಲ್ಲ. ಎಲ್ಲಾ ಸಂಘ ಸಂಸ್ಥೆಗಳಿಗೆ ಅದರದ್ದೇ ಆದ ಧ್ವಜಗಳಿಗೆ. ಹಾಗಂತ ಅವರು ರಾಷ್ಟ್ರ ಧ್ವಜ ಕ್ಕೆ ಗೌರವ ಕೊಡೋದು ಬಿಟ್ಟಿದಾರಾ.?
ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸೋಕೆ ಹೋದವರ ಮೇಲೆ ಗುಂಡು ಹಾರಿಸಿರೋದು ಕಾಂಗ್ರೆಸï.ಗುಂಡು ಹಾರಿಸಿ 11 ಜನರನ್ನು ಕೊಂದಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
