ರಾಷ್ಟ್ರವಿರೋಧಿ, ಮತಾಂಧತೆಯ ವಿರುದ್ಧ ಅರಿವು ಮೂಡಿಸಬೇಕು : ಸಿ.ಟಿ.ರವಿ

Social Share

ಬೆಂಗಳೂರು,ಸೆ.28- ಐಸಿಸ್ ಮಾದರಿಯ ಉಗ್ರಗಾಮಿಗಳನ್ನು ಬೆಂಬಲಿಸಿದ, ದೇಶದ ಒಳಗೆ ಅಭದ್ರತೆ, ಅಂತರ್‍ಯುದ್ಧ, ದೇಶದ ದ್ರೋಹದ ಸಂಚು ರೂಪಿಸುತ್ತಿದ್ದ ಪಿಎಫ್‍ಐ ಹಾಗೂ ಅದರ ಸಂಘಟನೆಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವಾಗತಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಿದೆ, ಇಷ್ಟು ಸಾಕಾಗುವುದಿಲ್ಲ. ಸಮಾಜ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ. ವಿದ್ರೋಹಿ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ : BIG NEWS: ದೇಶದ್ರೋಹಿ PFI ಸಂಘಟನೆ ಬ್ಯಾನ್, ಕೇಂದ್ರ ಸರ್ಕಾರ ಖಡಕ್ ನಿರ್ಧಾರ

ಯಾವ ಪಕ್ಷವೂ ಇದರ ರಾಜಕೀಯ ಲಾಭ ಪಡೆದುಕೊಳ್ಳಬಾರದು ರಾಜಕೀಯವಾಗಿ ನಿಮಗೆ ಲಾಭ ಕೊಟ್ಟರು, ದೇಶದ ಭವಿಷ್ಯದ ದೃಷ್ಟಿಯಿಂದ, ಸಮಾಜವನ್ನು ಈ ದುಷ್ಟ ಶಕ್ತಿಗಳ ಕೈಯಿಂದ ಬಿಡಿಸುವ ಕಾರ್ಯದಲ್ಲಿ ತೊಡಕಾಗಲಿದೆ. ದೇಶದ ಭದ್ರತೆಯ, ಸಮಾಜದ ಗೌರವ ಕಾಪಾಡುವ ನಿಟ್ಟಿನಲ್ಲಿ, ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯ ಮತ್ತು ರಾಷ್ಟ್ರ ವಿರೋಧಿ ಹಾಗು ಮತಾಂಧತೆಯ ವಿರುದ್ಧ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ನಿಷೇಧದ ನಂತರ ಪಿಎಫ್‍ಐ ಸಂಘಟನೆಗೆ ಸೇರಿದ ದುಷ್ಟ ಶಕ್ತಿಗಳು ಭೂಗತರಾಗಿ ಕಾರ್ಯ ನಿರ್ವಹಿಸುವ, ಸಮಾಜವನ್ನು. ಪ್ರಚೋದಿಸುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಇಂತಹ ಯಾವುದೇ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಕಾನೂನಿನ ಜೊತೆ ಕೈ ಜೋಡಿಸಲು ಅವರು ಮನವಿ ಮಾಡಿದ್ದಾರೆ.

Articles You Might Like

Share This Article