ಕೃಷಿ ಸುಧಾರಣೆಗೆ ಡಿಜಿಟಲ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ

Social Share

ತಿರುವನಂತಪುರಂ,ಮಾ.4- ಕೃಷಿಯ ಡಿಜಿಟಲ್ ರೂಪಾಂತರಕ್ಕೆ ಭಾರೀ ಪ್ರಮಾಣದಲ್ಲಿ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೃಷಿ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ದೇಶದ ಮೊದಲ ಡಿಜಿಟಲ್ ವಿಶ್ವವಿದ್ಯಾನಿಲಯ ಮತ್ತು ಐಸಿಎಆರ್‍ನ ಸೆಂಟ್ರಲ್ ಟ್ಯೂಬರ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಟಿಸಿಆರ್‍ಐ) ಪರಸ್ಪರ ಸಹಯೋಗ ವ್ಯಕ್ತಪಡಿಸಿವೆ.

ದೇಶಾದ್ಯಂತ ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಮತ್ತು ನಿರಂತರವಾಗಿ ಕಾಡುವ ಸಮಸ್ಯೆಗಳನ್ನು ಪರಿಹರಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಎರಡು ಸಂಸ್ಥೆಗಳು ತಮ್ಮ ಪರಿಣತಿಯನ್ನು ಬಳಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಲಿವೆ.

ಕೃಷಿ ಅಭಿವೃದ್ಧಿ ಯೋಜನೆಗಳು ಮತ್ತು ವಿದ್ಯಾರ್ಥಿಗಳ ಜಂಟಿ ಸಂಶೋಧನಾ ಕಾರ್ಯಕ್ರಮಗಳೊಂದಿಗೆ ಸುಸ್ಥಿರ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ. ಕೇರಳದಲ್ಲಿ ಆರಂಭಗೊಂಡಿರುವ ಮೊದಲ ಡಿಜಿಟಲ್ ವಿಶ್ವವಿದ್ಯಾಲಯ,

ಸಿಸಿಬಿ ದಾಳಿ : ಲಕ್ಷಾಂತರ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಕೇಂದ್ರ ಕೃಷಿ ಸಂಶೋಧನಾ ಸಂಸ್ಥೆ ಜೊತೆ ಕೈ ಜೋಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಕೃಷಿಯಲ್ಲಿ ಡಿಜಿಟಲ್ ಸಕ್ರಿಯಗೊಳಿಸುವಿಕೆ, ಕೃಷಿಯ ರೂಪಾಂತರದಿಂದ ಹಲವು ನವೀನ ಉತ್ಪನ್ನ ಅಭಿವೃದ್ಧಿ ಪಡಿಸಲು ಸಹಾಯವಾಗಬಹುದು ಎಂಬ ನಿರೀಕ್ಷೆಯನ್ನು ಕೇರಳದ ಡಿಜಿಟಲ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಸಾಜಿ ಗೋಪಿನಾಥ್ ವ್ಯಕ್ತಪಡಿಸಿದ್ದಾರೆ.

ಸಿಟಿಸಿಆರ್‍ಐ ನಿರ್ದೇಶಕ ಡಾ ಜಿ ಬೈಜು ಮಾತನಾಡಿ, ಎರಡು ಸಂಸ್ಥೆಗಳ ಸಹಯೋಗದಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ಸಂಶೋಧನೆಗಳು ನಡೆಯಲಿವೆ. ಸಂಯುಕ್ತ ಪಿಎಚ್‍ಡಿ ಅಧ್ಯಯನ, ವಿಜ್ಞಾನಿ ಮತ್ತು ಅಧ್ಯಾಪಕರ ನಡುವೆ ಜಂಟಿ ಸಂಶೋಧನಾ ಯೋಜನೆಗಳು ನಡೆಯಲಿವೆ.

ಇದರಿಂದ ಸುಸ್ಥಿರ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ವಿಪತ್ತು ಅಪಾಯ ತಗ್ಗಿಸುವಿಕೆ, ಜೀನೋಮಿಕ್ಸ್ ಮತ್ತು ಫಿನೋಮಿಕ್ ಅಧ್ಯಯನಗಳಿಗೆ ಡಿಜಿಟಲ್ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ KSRTCಯಲ್ಲಿ ಪ್ರಯಾಣ ಉಚಿತ

ಮರಗೆಣಸು, ಸಿಹಿ ಗೆಣಸು, ಗೆಣಸು, ಆನೆ ಕಾಲು ಯಾಮ್, ಟ್ಯಾರೋ ರೀತಿಯ ಬೆಳೆಗಳು ಹವಾಮಾನ ಸ್ಥಿತಿಸ್ಥಾಪಕ ಬೆಳೆಗಳಾಗಿದ್ದು, ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಹೊಂದಿವೆ. ಅವುಗಳನ್ನು ಬೆಳೆಯಲು ಇರುವ ಹಲವಾರು ಸಮಸ್ಯೆಗಳನ್ನು ಸಂಶೋಧನೆಯಿಂದ ಪರಿಹರಿಸಲಾಗುವುದು ಎಂದು ಹೇಳಿದರು.

CTCRI, Digital University, Kerala, collaborate, agri-tech, research,

Articles You Might Like

Share This Article