ಕೇಂದ್ರ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ

Social Share

ನವದೆಹಲಿ, ಆ.2- ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಕೋರ್ಸ್‍ಗಳ ಪ್ರವೇಶಕ್ಕೆ ಸೆಪ್ಟಂಬರ್ 1ರಿಂದ 11ರವರೆಗೆ ದೇಶ ಹಾಗೂ ವಿದೇಶಗಳ ನಗರಗಳಲ್ಲಿ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ನಡೆಯಲಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧ್ಯಕ್ಷ ಮಹಿದಾಲ ಜಗದೀಶ್ ಕುಮಾರ್ ಅವರು ಟ್ವೀಟ್ ಮೂಲಕ ಪರೀಕ್ಷೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿಯುಇಟಿ ಪರೀಕ್ಷೆಗಳಿಗೆ ಸೆಪ್ಟಂಬರ್ 1ರಿಂದ 7 ತಾರೀಖಿನವರೆಗೆ ಮತ್ತು 9ರಿಂದ 11ನೇ ತಾರೀಖಿನವರೆಗೆ ನಡೆಯಲಿವೆ. ದೇಶದ 500 ನಗರಗಳು ಹಾಗೂ ವಿದೇಶದ 13 ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ನಗರಗಳ ಮಾಹಿತಿ ಮತ್ತು ಪ್ರವೇಶ ಪತ್ರಗಳ ಬಗ್ಗೆ ಶೀಘ್ರವೇ ಮಾಹಿತಿ ನೀಡುವುದಾಗಿ ತಿಳಿಸಲಾಗಿದೆ. ಕಂಪ್ಯೂಟರ್ ಆಧಾರಿವಾಗಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಸುಮಾರು 3.57 ಲಕ್ಷ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಇದು ಏಕಗವಾಕ್ಷಿ ಅವಕಾಶಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

2022-23ನೇ ಸಾಲಿನ ಶೈಕ್ಷಣಿಕ ಸಾಲಿಗೆ ದೇಶದ 66 ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಪದವಿ ಪಡೆಯಲು ಈ ಪರೀಕ್ಷೆ ಪ್ರವೇಶ ಕಲ್ಪಿಸಲಿದೆ.

Articles You Might Like

Share This Article