ಬೆಂಗಳೂರು,ಅ.1- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನಿಂದ 16 ಐಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳ ಸಾಗಣೆ ಮಾಡಿಕೊಂಡು ಮೊಬೈಲ್‍ಗಳನ್ನು ಬ್ಯಾಂಕಾಕ್‍ನಿಂದ ವಿಮಾನದಲ್ಲಿ ತಂದಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಪ್ರಯಾಣಿಕ ಸಿಕ್ಕಿಬಿದ್ದಿದ್ದಾನೆ.
ಆತನಿಂದ 16 ಐಫೋನ್ 14 ಪ್ರೋಮ್ಯಾಕ್ಸ್ ಮೋಬೈಲ್‍ಗಳನ್ನು ವಶಪಡಿಸಿಕೊಂಡಿದ್ದು, ಭಾರತದಲ್ಲಿ ಇದರ ಮೌಲ್ಯ ತಲಾ ಮೊಬೈಲ್‍ಗೆ 1.90 ಲಕ್ಷ ಎಂದು ಅಂದಾಜಿಸಲಾಗಿದೆ. ವಿದೇಶದಲ್ಲಿ 96 ಸಾವಿರ ಮೌಲ್ಯ ಹೊಂದಿರುವ ಈ ಐಫೋನ್‍ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.