ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ ದಂಪತಿ ಸೆರೆ

Social Share

ಬೆಂಗಳೂರು, ನ.24- ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ಏರ್‍ಪೆಪೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಕಡಿಮೆ ಬೆಲೆಗೆ ಚಿನ್ನಾಭರಣವನ್ನು ಕೊಡಿಸುವುದಾಗಿ ನಂಬಿಸಿ ಪರಿಚಯಸ್ಥರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ದಂಪತಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿ, 34.50 ಲಕ್ಷ ರೂ. ನಗದು ಹಾಗೂ 106.965 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಹಾಗೂ ಧನುಷ್ಯ ಅಲಿಯಾಸ್ ರಾಚೆಲ್ ಬಂಧಿತ ವಂಚಕ ದಂಪತಿ.
ಇಂದಿರಾನಗರದಲ್ಲಿ ನೈಲ್‍ಬಾಕ್ಸ್ ಅಕಾಡೆಮಿ ನಡೆಸುತ್ತಿರುವ ಸ್ನೇಹ ಕೆ ಭಗವತ್ ಎಂಬುವರಿಗೆ ಈ ಅಕಾಡೆಮಿಯಲ್ಲಿ ತರಬೇತಿಗೆ ಸೇರಿದ್ದ ಧನುಷ್ಯ ಎಂಬಾಕೆ, ತನ್ನ ಗಂಡ ದಾರ್ಬಿನ್ ದಾಸ್ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಅವರು ವಶಪಡಿಸಿಕೊಂಡಿರುವ ಚಿನ್ನದ ವಡವೆಗಳನ್ನು ನಿಮಗೂ ಸಹ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದಳು.

ಸ್ನೇಹ ಕೆ ಭಗವತ್ ಎಂಬುವರಿಂದ ಬೇರೆ ಬೇರೆ ದಿನಾಂಕಗಳಂದು ಒಟ್ಟಾರೆಯಾಗಿ 68 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು ನಂತರ ಯಾವುದೇ ಚಿನ್ನದ ವಡವೆಗಳನ್ನು ಕೊಡಿಸದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಳು.

ಡಿಜಿಟಲ್ ಮಾಧ್ಯಮಕ್ಕೆ ಬೀಳಲಿದೆ ಕಡಿವಾಣ

ಈ ಸಂಬಂಧ ಸ್ನೇಹ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ದೇವನಹಳ್ಳಿಯ ಯೂರೋ ಕಿಡ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಶ್ವೇತಾ ಎಂಬುವರಿಗೆ ದಾರ್ಬಿನ್ ದಾಸ್ ಏರ್‍ಪೆಪೊರ್ಟ್‍ನಲ್ಲಿ ತಾನು ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಹೇಳಿ ಏರ್‍ಪೊರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ 96,750 ರೂ. ಗಳನ್ನು ಪಡೆದುಕೊಂಡು ನಂತರ ಕೆಲಸ ಕೊಡಿಸದೆ ತಲೆಮರೆಸಿಕೊಂಡಿದ್ದನು.

ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಅಕಾಡೆಮಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಂದಲೂ, ಮಗಳು ಓದುತ್ತಿರುವ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರಿಂದ ಹಾಗೂ ತಾವು ವಾಸವಿದ್ದ ಬ್ರಿಗೇಡ್ ಆರ್ಚಡ್ ಅಪಾರ್ಟ್‍ಮೆಂಟ್‍ನ ವಾಸಿಗಳಿಂದಲೂ ಏರ್‍ಪೋರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಕಡಿಮೆ ಬೆಲೆಗೆ ಐ-ಪೋನ್‍ಗಳನ್ನು, ಲ್ಯಾಪ್‍ಟಾಪ್, ಗ್ಯಾಜೆಟ್ಸ್‍ಗಳನ್ನು ಕೊಡಿಸುತ್ತೇನೆಂದು ಬೇರೆ ಬೇರೆ ದಿನಾಂಕಗಳಂದು ನಗದು ರೂಪದಲ್ಲಿ, ಆನ್‍ಲೈನ್ ಮೂಲಕ ಲಕ್ಷಾಂತರ ಹಣವನ್ನು ಪಡೆದುಕೊಂಡಿದ್ದಾರೆ.

31 ಗೋವುಗಳನ್ನೂ ದತ್ತು ಪಡೆದ ನಟ ಸುದೀಪ್

ತದ ನಂತರ ಗಂಡ- ಹೆಂಡತಿ ಇಬ್ಬರೂ ಮೊಬೈಲ್ ಪೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೆಪೊಲೀಸರು ಆರೋಪಿಗಳಾದ ದಾರ್ಬಿನ್ ದಾಸ್ ಹಾಗೂ ಧನುಷ್ಯ ದಂಪತಿಯನ್ನು ಉಡುಪಿಯಲ್ಲಿ ವಶಕ್ಕೆ ತೆಗೆದುಕೊಂಡು ನಂತರ ಅವರು ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮಂಗಳೂರಿನ ಮೇರಿಹಿಲ್ಸ್ ಏರ್‍ಪೋರ್ಟ್ ರಸ್ತೆಯಲ್ಲಿರುವ ವಾಸದ ಫ್ಲಾಟ್‍ನಿಂದ 34 ಲಕ್ಷದ 50 ಸಾವಿರ ನಗದು ಹಣ, 106.965 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲಿಗೆ ಟೆಟ್ರಾಪ್ಯಾಕ್ ಹಾಲು

ಈ ಪ್ರಕರಣದ ಆರೋಪಿಗಳನ್ನು ಬಂಸಲು ಬೆಂಗಳೂರು ನಗರದ ಈಶಾನ್ಯ ವಿಭಾಗದ ಉಪ ಪೊಲಿಸ್ ಆಯುಕ ್ತರಾದ ಅನೂಪ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಾಗೂ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಆರ್.ಮಂಜುನಾಥ್ ಅವರ ನೇತೃತ್ವದಲಿ ್ಲ ಪೊಲೀಸ್-ಇನ್ಸ್‍ಪೆಕ್ಟರ್ ಎನ್.ರಾಜಣ್ಣ ಅವರನ್ನೊಳಗೊಂಡ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

customs, officer, cheating, money, couple, arrested,

Articles You Might Like

Share This Article