ನಾಳೆ ಮಹತ್ವದ ಸಿಡಬ್ಲ್ಯೂಸಿ ಸಭೆ, ರಾಹುಲ್ ನಾಯಕತ್ವಕ್ಕೆ ಹೆಚ್ಚಿದ ಒತ್ತಡ

ನವದೆಹಲಿ, ಆ.23- ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಾಯಕತ್ವ ವಿಷಯದಲ್ಲಿ ಪಕ್ಷದಲ್ಲಿ ಭಾರೀ ಭಿನ್ನಾಭಿಪ್ರಾಯ ತಲೆದೋರಿರುವ ಸಂದರ್ಭದಲ್ಲೇ ನಾಳೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯೂಸಿ) ಭಾರೀ ಮಹತ್ವ ಪಡೆದುಕೊಂಡಿದೆ.

ರಾಹುಲ್‍ಗಾಂ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದು, ಈ ಸಂಬಂಧ 20 ಹಿರಿಯ ನಾಯಕರು ಪಕ್ಷದ ಅನಾಯಕಿ ಸೋನಿಯಾಗಾಂ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳಿನ ಸಿಡಬ್ಲ್ಯೂಸಿ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಕಾಂಗ್ರೆಸ್ ಸಂಸದರು, ಕೇಂದ್ರದ ಮಾಜಿ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 20 ಮುಖಂಡರು ಸೋನಿಯಾ ಅವರಿಗೆ ಪತ್ರ ಬರೆದು ಪಕ್ಷದ ಹಿತದೃಷ್ಟಿಯಿಂದ ಮತ್ತು ಕಾಂಗ್ರೆಸ್ ಸಂಘಟನೆಗಾಗಿ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಸೋನಿಯಾ ಅವರ ನಾಯಕತ್ವದಲ್ಲೇ ನಿಷ್ಠೆ ವ್ಯಕ್ತಪಡಿಸಿರುವ ಮತ್ತೊಂದು ಬಣ ಯುಪಿಎ ಅಧ್ಯಕ್ಷರೇ ಕಾಂಗ್ರೆಸ್ ನಾಯಕಿಯಾಗಿ ಮುಂದುವರಿಯಬೇಕು. ಅವರ ಒತ್ತಡ ನಿಭಾಯಿಸಲು ಇಬ್ಬರು ಉಪಾಧ್ಯಕ್ಷರನ್ನು ನೇಮಿಸಿ ಅವರಿಗೆ ನೆರವು ನೀಡುವಂತೆ ಸಲಹೆ ಮಾಡಿದ್ದಾರೆ.

ಕಾಂಗ್ರೆಸ್ ವರ್ಚಸ್ಸು ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಅವರೇ ಎಐಸಿಸಿ ಅಧ್ಯಕ್ಷರಾಗುವುದು ಸೂಕ್ತ ಎಂದು 20 ಮುಖಂಡರು ಸೋನಿಯಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಸಿಡಬ್ಲ್ಯೂಸಿ ಸಭೆಯಲ್ಲಿ ನಾಯಕತ್ವ ಸೇರಿದಂತೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು, ನಾಳೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆಯಾಗಿ ಒಮ್ಮತದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಳಿನ ಸಿಡಬ್ಲ್ಯೂಸಿ ಸಭೆ ಕುತೂಹಲ ಕೆರಳಿಸಿದೆ.

Sri Raghav

Admin