ಬರ್ಮಿಂಗ್‍ಹ್ಯಾಮ್, ಜು.31 -ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸನಲ್ಲಿ ಭಾರತ ತನ್ನ ಪದಕದ ಭೇಟೆ ಮುಂದುವರಿಸಿದ್ದು, ಮಹಿಳೆಯರ 55 ಕೆಜಿ ವಿಭಾಗದಲ್ಲಿ ವೇಟ್‍ಲಿಫ್ಟರ್ ಬಿಂದ್ಯಾರಾಣಿ ದೇವಿ (55 ಕೆಜಿ) ಬೆಳ್ಳಿ ಪದಕಕ್ಕೆ ಕೊರಳಿದೇರಿಸಿಕೊಂಡಿದ್ದಾರೆ.
ಬಿಂದ್ಯಾರಾಣಿ ಒಟ್ಟು 202ಕೆಜಿ ಭಾರ ಎತ್ತಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು 116 ಕೆಜಿ ಕ್ಲೀನ್ ಮತ್ತು ಜರ್ಕ್ ಲಿಫ್ಟ್‍ನೊಂದಿಗೆ, ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ ಜೊತೆಗೆ ಒಂದೇ ಕ್ರೀಡೆಯಲ್ಲಿ 2 ಪದಕ ಪಡೆಯುವ ಮೂಲಕ ಬಿಂದ್ಯಾರಾಣಿ ಕಾಮನ್ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿದ್ದಿದ್ದಾರೆ.
ಇದಕ್ಕೂ ಮೊದಲು ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದರು ಈಗಾಗಲೆ ವೇಟ್ ಲಿಫ್ಟಿಂಗ್‍ನಲ್ಲಿ ಸಂಕೇತ್ ಸಗರ್ ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.