73 ಕೆಜಿ ವಿಭಾಗದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾತರದ ಅಚಿಂತಾ ಶೆಯುಲಿಗೆ ಚಿನ್ನ

Social Share

ಬ್ರಿಮಿಂಗ್‍ಹ್ಯಾಂಮ್.ಆಗಸ್ಟ್ 1 – ಇಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾತರದ ವೇಟ್‍ಲಿಪ್ಟರ್ ಅಚಿಂತಾ ಶೆಯುಲಿ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಎನ್ ಇಸಿ ಹಾಲ್‍ನಲ್ಲಿ ನಡೆದ ರೋಚಕ ಪೈಪೋಟಿಯಲ್ಲಿ ಶೆಯುಲಿ 313 ಕೆಜಿ ತೂಕ ಎತ್ತುವ ಮೂಲಕ (143 ಕೆಜಿ+170 ಕೆಜಿ) ಚಿನ್ನವನ್ನು ತನ್ನದಾಗಿಸಿಕೊಂಡರು.

ಶೆಯುಲಿಗೆ ಕಠಿಣ ಪೈಪೋಟಿ ನೀಡಿದ ಮಲೇಷ್ಯಾದ ಎರಿರ್‍ಹಿದಾಯತ್ ಮುಹಮ್ಮದ್ ಬೆಳ್ಳಿ ಪದಕ ಗೆದ್ದರೆ , ಕೆನಡಾದ ಶಾದ್ ಡಾರ್ಸಿಗಿನಿ ಒಟ್ಟು 298 ಕೆಜಿ (135 ಕೆಜಿ+163 ಕೆಜಿ) ಎತ್ತುವ ಮೂಲಕ ಕಂಚಿನ ಪದಕ ಪಡೆದರು.

ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದಿದ್ದ ಶೆಯುಲಿ, ಸ್ನ್ಯಾಚ್ ವಿಭಾಗದಲ್ಲಿ 137 ಕೆಜಿ, 140 ಕೆಜಿ ಮತ್ತು 143 ಕೆಜಿ ಎತ್ತಿರಂಭದಲ್ಲೇ ಎಲ್ಲರನ್ನು ಅಚ್ಚರಿಗುಳಿಸಿದ್ದರು. ಅಂತಿಮ ಹಂತದಲ್ಲಿ ಕೋಲ್ಕತ್ತಾ ಕ್ರೀಡಾಪಟು ಭರವಸೆಯನ್ನು ಮತ್ತಷ್ಟು ಹೆಚ್ಚಿಸಿ 166 ಕೆಜಿ ಸುಲಭವಾಗಿ ಎತ್ತಿದರು. ತನ್ನ 170 ಕೆ.ಜಿ ಪ್ರಯತ್ನವನ್ನು ಮೂರನೇ ಪ್ರಯತ್ನದಲ್ಲಿ ಹೆಚ್ಚಿಸಿಕೊಂಡರೂ (ಒಟ್ಟು 313 ಕೆಜಿ) ಹೊಸ ಕೂಟ ದಾಖಲೆಗೆ ಸ್ವಲ್ಪದರಲ್ಲೇ ವಿಫಲರಾದರು.

ಮಲೇಷಿಯಾದ ಆಟಗಾರ ತನ್ನ ಕೊನೆಯ ಎರಡು ಪ್ರಯತ್ನಗಳಲ್ಲಿ 176 ಕೆಜಿ ಎತ್ತುವ ಪ್ರಯತ್ನದಲ್ಲಿ ವಿಫಲವಾದರು ನಂತರ ಎಲ್ಲರ ಚಿತ್ತ ಶೆಯುಲಿ ಮೇಲೆ ನೆಟ್ಟಿತು.

ಕೊನೆಯವರೆಗೂ ತಾಳ್ಮೆಯಿಂದ ಕಾದ ಶೆಯುಲಿ ಚಿನ್ನ ದ ಪದಕ ಕಾತರಿಯಾಯಿತು ಸಂಭ್ರಮದ ನಡುವೆ ಭಾರತಕ್ಕೆ ಮೂರನೇ ಚಿನ್ನ ತಂದುಕೊಟ್ಟರು. ಭಾರತದ ವೇಟ್‍ಲಿಪ್ಟರ್‍ತಂಡವು ಕ್ರೀಡಾಕೂಟದ ಆರನೇ ಪದಕವನ್ನು ಪಡೆದುಕೊಂಡು ಗಮನಸೆಳೆದಿದೆ

Articles You Might Like

Share This Article