ಸೈಬರ್ ಅಪರಾಧ ನಿರ್ಲಕ್ಷಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ

Social Share

ಬೆಳಗಾವಿ, ಡಿ.26- ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀಲ್ಸ್, ಬ್ಯಾಂಕ್ ಅಪರಾಧ ಸೇರಿದಂತೆ ಇತರೆ ಸೈಬರ್ ಅಪರಾಧ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯವಹಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಶ್ಲೀಲ ವಿಡಿಯೋ ವೈರಲ್ ಮಾಡುವುದು ಸಾಮಾಜಿಕ ಪಿಡುಗು ಇದ್ದಂತೆ. ಸೈಬರ್ ಅಪರಾಧ ನಿಲ್ಲಿಸಲು ಪೊಲೀಸ್, ಕಾಯ್ದೆಗಿಂತ ಸಾರ್ವಜನಿಕರೇ ನೇರವಾಗಿ ವಿರೋಧಿಸಲಿ. ಅಲ್ಲದೆ, ಒಂದು ವೇಳೆ ಸೈಬರ್ ಅಪರಾಧ ಕುರಿತು ಜನರು ದೂರು ನೀಡಿದರೂ, ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಅಶ್ಲೀಲ ರೀಲ್ಸ್‍ಗಳು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ.

ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸೈಬರ್ ಕ್ರೈಮ್ ವಂಚನೆಗೊಳಗಾದವರ ನೆರವಿಗಾಗಿ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್ ಠಾಣೆಗಳನ್ನು ತೆರೆದಿದೆ. ಜತೆಗೆ ಬೆಂಗಳೂರು ಸೇರಿದಂತೆ ಎಂಟು ವಿಭಾಗಗಳಲ್ಲಿ ಸಹ ಸೈಬರ್ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು

ಜಿಲ್ಲಾವಾರು ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಸಿಐಡಿ ಹಾಗೂ ಸೈಬರ್ ಪೊಲೀಸರಿಗೆ ಅಹ್ಮದಾಬಾದ್ ಎಫ್‍ಎಸ್‍ಎಲ್ ಅಧ್ಯಯನ ಕೇಂದ್ರಕ್ಕೆ ಕಳುಹಿಸಿ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲೂ ಎಫ್‍ಎಸ್ ಎಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಪಿ.ಆರ್.ರಮೇಶ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಸಂಸ್ಕೃತಿ ಮೇಲೆ ದಾಳಿ ನಡೆಸಲಾಗುತ್ತಿದೆ. ರೀಲ್ಸ್, ವಿಡಿಯೋ ಮೂಲಕ ಅಶ್ಲೀಲ, ನಗ್ನ, ಅರೆ ನಗ್ನ ವಿಡಿಯೋ ಗಳ ಮೂಲಕ ಜನರ ಗಮನ ಬೇರೆ ಕಡೆ ಸೆಳೆದು ಅಪರಾಧ ಮಾಡಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವಿಷಯಕ್ಕೆ ಜೆಡಿಎಸ್ ಉಪನಾಯಕ ಟಿ.ಎ. ಶರವಣ ಮಾತನಾಡಿ, ಸೈಬರ್ ಅಪರಾಧ ನಿಗ್ರಹ ದಳ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದನ್ನು ಸ್ವಾಯತ್ತ ಇಲಾಖೆಯನ್ನಾಗಿಸಿ ಪರಿಗಣಿಸಿ ಸೈಬರ್ ಪರಿಣಿತರನ್ನು ನೇಮಿಸಿ ಅದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ರೆಡ್ಡಿ ಪಕ್ಷ ಬಿಜೆಪಿಗೆ ಸಂಕಷ್ಟವೇ..? ಕಾಂಗ್ರೆಸ್, ಜೆಡಿಎಸ್ ವೇಗಕ್ಕೆ ಕಡಿವಾಣವೇ.?

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ನಾನೇ ಸ್ವತಃ ಎರಡು ದೂರು ಕೊಟ್ಟಿದ್ದೇನೆ. ಆದರೆ, ಅಲ್ಲಿನ ಸಿಬ್ಬಂದಿ, ಆರೋಪಿಗಳನ್ನು ಯಾರು ಹಿಡಿಯುವುದು ಎಂಬ ಬೇಜವ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ನಂತರ ಆರಗ ಜ್ಞಾನೇಂದ್ರ ಅವರು ಮಾತನಾಡಿ, ರಾಜ್ಯದಲ್ಲಿ ಸೈಬರ್ ಅಪರಾಧ ಚಟುವಟಿಕೆಗಳನ್ನು ತಡೆಯಲು ಇಲ್ಲಿನ ಪೊಲೀಸರು ಸಮರ್ಥರಾಗಿದ್ದಾರೆ. ಈಗಾಗಲೇ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

cyber crime, ignore, police, action, Home Minister, Araga Jnanendra,

Articles You Might Like

Share This Article