ನವದೆಹಲಿ, ಮಾ.3 – ಸೈಬರ್ ಅಪರಾಧದ ವಿಲಕ್ಷಣ ಪ್ರಕರಣವೊಂದರಲ್ಲಿ ವಂಚಕರ ಗುಂಪೊಂದು ಆನ್‍ಲೈನ್‍ನಲ್ಲಿ ಲಭ್ಯವಿರುವ ಜಿಎಸ್‍ಟಿ ಗುರುತಿನ ಸಂಖ್ಯೆಗಳಿಂದ ಹಲವಾರು ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಪ್ಯಾನ್ ವಿವರಗಳನ್ನು ಪಡೆದುಕೊಂಡಿದೆ ಮತ್ತು ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‍ಗಳನ್ನು ಪುಣೆಯಿಂದ ಪಡೆದುಕೊಂಡಿದೆ.
ಫಿನ್ಟೆಕ್ ಸ್ಟಾರ್ಟ್ ಅಪ್ ಒನ್ ಕಾರ್ಡ್ ಸಂಸ್ಥೆ ತೆರೆದು ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತದ ಶಹದಾ ರೋಹಿತ್ ಮೀನಾ ಹೇಳಿದ್ದಾರೆ.
ಪತ್ನಿ-ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಸ್ಥಿತಿ ಗಂಭೀರ
ಈ ಪ್ರಕಣಕ್ಕೆ ಸಂಭಂದಿಸಿದಂತೆ ಪುನೀತ್, ಮೊಹಮ್ಮದ್ ಆಸಿಫ, ಸುನೀಲ್ ಕುಮಾರ್, ಪಂಕಜ್ ಮಿಶಾರ್ ಮತ್ತು ವಿಶ್ವ ಭಾಸ್ಕರ್ ಶರ್ಮಾ ಎಂಬ ಐವರನ್ನು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಯುತ್ತಿದೆ ನಾವು ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಮೀನಾ ತಿಳಿಸಿದರು.
40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ
ಕಂಪನಿಯು ವಂಚನೆಯ ದಾರಿ ಹಿಡಿದು ಕೆಲವು ನಕಲಿ ಕಾರ್ಡ್‍ಗಳನ್ನು ಬಳಸಿ ಅಸಾಮಾನ್ಯ ರೀತಿಯಲ್ಲಿ ವಂಚಿಸಲು ನಿಕಟ ಸಮನ್ವಯದಿಂದ ಆರೋಪಿಗಳು ಇತ್ತೀಚೆಗೆ 21.32 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲಾಗಿದೆ. ತಕ್ಷಣವೇ ದೆಹಲಿ ಪೊಲೀಸರಿಗೆ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಇದೊಂದು ದೊಡ್ಡ ಜಾಲವಾಗಿದ್ದು ವಿಸೃತ ತನಿಖೆ ನಡೆಸಲಾಗುತ್ತಿದೆ.
Cybercriminals, PAN details, Dhoni, Abhishek Bachchan, credit card fraud, 5 arrested,