ವೆಲ್ಲಿಂಗ್ಟನ್, ಫೆ.14- ಗೇಬ್ರಿಯೆಲ್ ಚಂಡಮಾರುತವು ದೇಶದ ಉತ್ತರ ಭಾಗ ಜರ್ಜರಿತಗೊಳಿಸಿ ವ್ಯಾಪಕ ಪ್ರವಾಹ ಅಪಾರ ಹಾನಿ ಉಂಟುಮಾಡಿರುವ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ದೇಶದ ಅತಿದೊಡ್ಡ ನಗರವಾದ ಆಕ್ಲೆಂಡ್ ಬಳಿ ರಾತ್ರಿಯಿಡೀ ಸಂಭವಿಸಿದ ಭೂಕುಸಿತದಲ್ಲಿ ಸಿಕ್ಕಿಬಿದ್ದ ಕೆಲವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ ಅನೇಕರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಕ್ಲೆಂಡ್‍ನಲ್ಲಿ ಚಂಡಮಾರುತದಿಂದ ಸುರರಿದ ದಾರಾಕಾರ ಮಳೆ ಅನೇಕ ಪ್ರದೇಶಗಳು ಜಲಾವೃತವಾಗಿದೆ ದೇಶಕ್ಕೆ ಡೊಡ್ಡ ಹಾನಿಗೊಳಗಾಗಿದೆ ಎಂದು ತುರ್ತು ನಿರ್ವಹಣಾ ಸಚಿವ ಕೀರನ್ ಮ್ಯಾಕ್ ಅನುಲ್ಟಿ ಹೇಳಿದ್ದಾರೆ.
ಸುಮಾರು 60 ಸಾವಿರಕ್ಕೂ ಹೆಚ್ಚು ಮನೆಗೆ ವಿದ್ಯುತ್ ಕಡಿತ ಉಂಟಾಗಿದೆ ನ್ಯೂಜಿಲೆಂಡ್ ಜನರ ಜೀವಗಳಿಗೆ ನಿಜವಾದ ಬೆದರಿಕೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ವಿಮಾನ ,ರೈಲು ಸಂಚಾರ ಬಹುತ್ತೇಕ ನಿಲ್ಲಿಸಲಾಗಿದೆ.ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಷ್ಟ್ರೀಯ ತುರ್ತು ಘೋಷಣೆಯಿಂದ ಪ್ರವಾಹದಿಂದ ಬಾದಿತ ಪ್ರದೇಶಗಳಿಗೆ ನೆರವು ಮತ್ತು ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.ಪ್ರಸ್ತುತ ರಾಷ್ಟ್ರೀಯ ತುರ್ತು ಪರಿಸ್ಥಿತಿಯು ಆಕ್ಲೆಂಡ್, ನಾರ್ತ್‍ಲ್ಯಾಂಡ್, ತೈರಾವಿಟಿ, ಬೇ ಆಫ್ ಪ್ಲೆಂಟಿ, ವೈಕಾಟೊ ಮತ್ತು ಹಾಕ್ಸ್‍ಬೇ ಪ್ರದೇಶಗಳುಒಳಗೊಂಡಿದೆ.
ಸಾಮಾನ್ಯವಾಗಿ ಬೀಳುವುದಕ್ಕಿಂತ ಮೂರು ಪಟ್ಟು ಹೆಚ್ಚು ಮಳೆ ರಾತ್ರಿಯಲ್ಲಿ ಸುರಿದಿದೆ ಎಂದು ಮೆಟ್‍ಸರ್ವಿಸ್ ಹವಾಮಾನಶಾಸ್ತ್ರಜ್ಞ ಲೂಯಿಸ್ ಫೆರಿಸ್ ಹೇಳಿದ್ದಾರೆ.
ಅತ್ಯಂತ ಕಠಿಣವಾದ ಪ್ರದೇಶಗಳಲ್ಲಿ ಮಿಲಿಟರಿ ಈಗಾಗಲೇ ನೆಲದಲ್ಲಿದ್ದು ಜನರ ಜೀವ ಉಳಿಸಲು ಮತ್ತು ಸ್ಥಳಾಂತರಕ್ಕೆ ಸಹಾಯ ಮಾಡುತ್ತದೆ ಮತ್ತು ಅಗತ್ಯ ವಸ್ತು ಸರಬರಾಜು ಮಾಡುತ್ತಿದೆ ಎಂದು ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಕ್ರಿಸ್ ಹಿಪ್ಕಿನ್ಸ್ ತಿಳಿಸಿದ್ದಾರೆ.
#CycloneGabrielle, #withoutpower, #NewZealand,