ಬೆಂಗಳೂರು,ಮಾ.3- ಮನೆಯೊಂದರದಲ್ಲಿ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಸ್ಪೋಟಗೊಂಡ ಪರಿಣಾಮ 13 ಮಂದಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಅಜ್ಮಲ್ (46), ನಾಜೀಮ(42), ರಿಯಾನ(14), ಅಜ್ವಾನ್ (12), ಪಯಾಜ್ (10), ಅಮೀನಜಾನ್ (52), ಶಬನಾಬ್ (18), ನಾಸೀಮ (40), ಸಲ್ಮಾ(33), ರೇಷ್ಮಾಭಾನು (48) ಸೇರಿದಂತೆ ಇನ್ನಿತರರು ಗಾಯಗೊಂಡಿದ್ದು, ಎಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರಿಯಪ್ಪನಪಾಳ್ಯದ 2ನೇ ಮುಖ್ಯರಸ್ತೆ 4ನೇ ಕ್ರಾಸ್‍ನ ಕಟ್ಟಡವೊಂದರ ಒಂದನೇ ಮಹಡಿಯಲ್ಲಿ ಅಜ್ಮಲ್ ಕುಟುಂಬ ಬಾಡಿಗೆಗೆ ಇದ್ದು, ಇವರ ಮನೆಯಲ್ಲಿ ಸಮಾರಂಭ ನಿಮಿತ್ತ ನೆಂಟರಿಷ್ಟರೆಲ್ಲರೂ ಬಂದಿದ್ದರು. ಒಟ್ಟು 13 ಮಂದಿ ಇದ್ದರು.
40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ
ಸಮಾರಂಭಕ್ಕಾಗಿ ರಾತ್ರಿ ತಿಂಡಿಗಳನ್ನು ಮಾಡಿದ ನಂತರ ಸಿಲಿಂಡರ್ ಆಫ್ ಮಾಡಿರಲಿಲ್ಲ. ಆ ವೇಳೆ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿದೆ. ಇದು ಯಾರ ಗಮನಕ್ಕೂ ಬಂದಿಲ್ಲ. ಈ ಸಮಯದಲ್ಲಿ ಇನ್ನೂ ಕೆಲವರು ಮಲಗಿದ್ದರು.
ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಮನೆಯಲ್ಲಿ ಲೈಟ್ ಹಾಕುತ್ತಿದ್ದಂತೆ ಅನಿಲ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಮನೆಯಲ್ಲಿದ್ದವರಿಗೆ ಸುಟ್ಟಗಾಯಗಳಾಗಿವೆ. ಸ್ಪೋಟದ ರಂಭಸಕ್ಕೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಒಂದು ಭಾಗದ ಗೋಡೆ ಉರುಳಿ ಬಿದ್ದಿದೆ.
ಕೂಡಲೇ ವಿಧಾನಸಭೆ ಚುನಾವಣೆ ಘೋಷಣೆ ಮಾಡಲು ಸಿದ್ದರಾಮಯ್ಯ ಒತ್ತಾಯ
ಇವರ ಮನೆಯಿಂದ ಕೂಗಾಟ, ಚೀರಾಟ ಕೇಳಿದ ನೆರೆ ಮನೆಯವರು ನೆರವಿಗೆ ದಾವಿಸಿ ತಕ್ಷಣ ಆ್ಯಂಬುಲೆನ್ಸ್‍ಗೆ ಕರೆ ಮಾಡಿ ಪೊಲೀಸರಿಗೂ ವಿಷಯ ತಿಳಿಸಿ, ಬೆಂಕಿಯಿಂದ ಮನೆಯವರನ್ನು ರಕ್ಷಿಸಿ ಹೊರ ಕರೆತಂದಿದ್ದಾರೆ.
ರಾಜಾಜಿನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡವಾಗಿ ಬಂದ ಆ್ಯಂಬುಲೆನ್ಸ್: ಘಟನೆ ನಡೆದ ತಕ್ಷಣ ಸ್ಥಳೀಯರು ಆ್ಯಂಬುಲೆನ್ಸ್‍ಗೆ ಕರೆ ಮಾಡಿದ್ದರೂ ಸ್ಪಂದಿಸದೆ ಒಂದೂವರೆ ಗಂಟೆ ತಡವಾಗಿ ಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಬಳಸಿಕೊಳ್ಳಲೆಂದೇ ಸೌಲಭ್ಯ ನೀಡಿದ್ದರೂ ಸಹ ಪ್ರಯೋಜನಕ್ಕೆ ಬಾರದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Cylinder, blast, 13 injured, Bengaluru,