ನೊಯಿಡ,ಫೆ.12 – ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ತಡ ರಾತ್ರಿ 2.52 ರ ಮಾಹಿತಿ ದೊರಕಿದ್ದು, ಸ್ಥಳಕ್ಕಾಗಮಿಸಿದಾಗ 6 ಜನ ಸುಟ್ಟುಹೋಗಿರುವುದು ಕಂಡು ಬಂದಿದ್ದು, ಇವರಲ್ಲಿ 12 ವರ್ಷದ ಬಾಲಕ ಮತ್ತು 12 ದಿನದ ಹಸುಗೂಸು ಸಾವನ್ನಪ್ಪಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ರಾಖಿ ಸಾವಂತ್ ಪ್ರಿಯಕರ ಆದಿಲ್ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲು
ಎಲ್‍ಪಿಜಿ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡು ಸೋಟಗೊಂಡಿದ್ದು, 20 ನಿಮಿಷಗಳಲ್ಲಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ರವಾನಿಸಲಾಗಿದೆ.
Cylinder, explosion, leaves, two children, dead, Noida,