ಬೆಂಗಳೂರು, ಫೆ.10- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹತಾಶೆಯಿಂದ ಟಿಪ್ಪು ಹಾಗೂ ಸಾವರ್ಕರ್ ನಡುವಿನ ಚುನಾವಣೆ ಎಂದು ಹೇಳಿಕೆ ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರು ಹತಾಶರಾಗಿದ್ದಾರೆ ಎಂಬುದಕ್ಕ್ಕೆ ಅವರ ಹೇಳಿಕೆಗಿಂತ
ಬೇರೆ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು. ಸರ್ಕಾರದ ಭ್ರಷ್ಟಾಚಾರ, ಜನರಿಗೆ ಉದ್ಯೋಗ, ನಾಡಿನ ಶಾಂತಿ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಅವರು ಆ ರೀತಿ ಮಾತನಾಡುತ್ತಿಲ್ಲ. ಬದುಕು ಮತ್ತು ಭಾವನೆ ಎಂದು ನಾವು ಮೊದಲೇ ಹೇಳಿದ್ದೇವೆ. ಕಟೀಲ್ ಅವರಿಗೆ ಸರ್ಕಾರದ ಸಾಧನೆ ಹೇಳಲು ಆಗುತ್ತಿಲ್ಲ ಎಂದರು.
ಅವರು ಸಾಹುಕಾರ್ ಫೋಟೋವನ್ನಾದರೂ ಇಟ್ಟುಕೊಳ್ಳಲಿ, ಸಾವರ್ಕರ್ ಫೋಟೋವಾದರೂ ಇಟ್ಟುಕೊಳ್ಳಲಿ ಅಥವಾ ಬೇರೆ ಯಾರಾದರೂ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಲಿ ನಮ್ಮ ಅಭ್ಯಂತರವಿಲ್ಲ.
ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ಭ್ರಷ್ಟಾಚಾರವಿಲ್ಲದ ಸರ್ಕಾರ ಮಾಡುವ, ಉದ್ಯೋಗ ನೀಡುವ ಭರವಸೆ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಯಾವ ದೃಷ್ಟಿಕೋನದಲ್ಲಿ ಬ್ರಾಹ್ಮಣ ಸಿಎಂ ಪ್ರಸ್ತಾಪ ಮಾಡಿದ್ದಾರೋ ಗೊತ್ತಿಲ್ಲ. ಅದು ಅವರ ಪಕ್ಷದ ವಿಚಾರ ಎಂದ ಅವರು, ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
d k shivakumar, Nalin Kumar Kateel, election,