ಎಂ.ಬಿ.ಪಾಟೀಲ್ ನೋವು ತೋಡಿಕೊಂಡಿದ್ದಾರಷ್ಟೇ,ಯಾವುದೇ ಭಿನ್ನಮತವೂ ಇಲ್ಲ : ಡಿಕೆಶಿ

DK-Shivakumar--01
ಬೆಂಗಳೂರು, ಜೂ.10-ನಮ್ಮಲ್ಲಿ ಯಾವ ಭಿನ್ನಮತವೂ ಇಲ್ಲ, ಬಣವೂ ಇಲ್ಲ. ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಅವರು ತಮಗಾಗಿರುವ ನೋವನ್ನು ಹೈಕಮಾಂಡ್ ಜೊತೆ ತೋಡಿಕೊಂಡಿದ್ದಾರೆ. ಇದು ತಪ್ಪಲ್ಲ. ಹಾಗೆಂದ ಮಾತ್ರಕ್ಕೆ ಅದು ಭಿನ್ನಮತವಲ್ಲ ಎಂದು ಹೇಳಿದರು.

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಿಗಿದ್ದೇವೆ. ಅಧಿಕಾರ ಸಿಗದಿದ್ದಾಗ ಅಸಮಾಧಾನವಾಗುವುದು ಸಹಜ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಹೊರಗಿಡಲಾಗಿತ್ತು. ಪರಮೇಶ್ವರ್ ಅವರಿಗೂ ಅಧಿಕಾರ ಇರಲಿಲ್ಲ. ನಾವೆಲ್ಲ ತಾಳ್ಮೆಯಿಂದ ಇದ್ದೆವು. ಎಲ್ಲದಕ್ಕೂ ಸಮಯ ಬರಬೇಕು, ತಾಳ್ಮೆ ಮುಖ್ಯ. ಎಂ.ಬಿ.ಪಾಟೀಲ್ ಅವರು ತಮಗಾಗಿರುವ ನೋವನ್ನು ಹೇಳಿಕೊಂಡಿದ್ದಾರೆ. ಅವರಿಗೂ ಅವಕಾಶ ಸಿಗುತ್ತದೆ. ಎಲ್ಲವೂ ಬಗೆಹರಿಯುತ್ತದೆ.ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಪುನರುಚ್ಚರಿಸಿದರು.

Sri Raghav

Admin