ಡಾಬಾ ನೌಕರನ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

Social Share

ಬೆಂಗಳೂರು,ಜ.14- ಡಾಬಾ ನೌಕರನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆಗೆ ಸಂಚು, ಅಪಹರಣ ಮತ್ತು ಗಲಾಟೆ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ನಗರದ ಯೂಟರ್ನ್ ಡಾಬಾದಲ್ಲಿ ಕಳೆದ ಮೂರು ವರ್ಷಗಳಿಂದ ಹಾಸನ ಮೂಲದ ಮನೋಜ್(19) ಕೆಲಸ ಮಾಡಿಕೊಂಡಿದ್ದನು.
ಡಿ.23ರಂದು ಈ ಡಾಬಾಗೆ ಬಂದಿದ್ದ ಆರೋಪಿಗಳು ಊಟ ಮಾಡಿದ ಬಳಿಕವೂ ತುಂಬಾ ಹೊತ್ತು ಕುಳಿತು ಮಾತನಾಡುತ್ತ್ರಿವುದನ್ನು ಗಮನಿಸಿದ ಸಿಬ್ಬಂದಿ ತಡವಾಯ್ತು ಬಾಗಿಲು ಹಾಕಬೇಕು. ಬಿಲ್ ನೀಡುವಂತೆ ಕೇಳಿದಾಗ ಸಿಬ್ಬಂದಿ ಜೊತೆ ಜಗಳವಾಗಿ ಹೋಗಿದ್ದಾರೆ. ರಾತ್ರಿ 12 ಗಂಟೆ ಸುಮಾರಿನಲ್ಲಿ ಮತ್ತೆ ಈ ಡಾಬಾ ಬಳಿ ಬಂದ ಆರೋಪಿಗಳು ಡಾಬಾದ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ.
ಆ ವೇಳೆ ನೌಕರ ಮನೋಜ್ ಶಾರ್ಟ್‍ಸಕ್ರ್ಯೂಟ್ ಆಗಿರಬಹುಹದೆಂದು ತಿಳಿದು ಬಾಗಿಲು ತೆಗೆಯುತ್ತಿದ್ದಂತೆ ಆರೋಪಿಗಳು ಈತನ ಮೇಲೆ ಪೆಟ್ರೋಲ್ ಎರಚಿದ್ದರಿಂದ ಬೆಂಕಿತಾಗಿ ಗಂಭೀರ ಸುಟ್ಟಗಾಯಗಳಾಗಿತ್ತು. ತಕ್ಷಣ ಮನೋಜ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಡಿ.28ರಂದು ಮನೋಜ್ ಮೃತಪಟ್ಟಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿ ಆಧರಿಸಿ ಮೂವರು ಆರೋಪಿಗಳನ್ನು ಬಂಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಈ ಕೃತ್ಯ ವೆಸಗಿದ್ದಾರೆಯೇ ಅಥವಾ ದ್ವೇಷದಿಂದ ನೌಕರನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರಾ ಎಂಬ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಈ ಘಟನೆ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Articles You Might Like

Share This Article