ಆಶಾ ಪರೇಖ್‍ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

Social Share

ಮುಂಬೈ,ಸೆ.27- ಬಾಲಿವುಡ್ ನಟಿ, ನಿರ್ದೇಶಕಿ, ನಿರ್ಮಾಪಕಿ ಆಶಾ ಪರೇಖ್ ಅವರಿಗೆ 2020ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಆಶಾ ಪರೇಖ್ ಅವರು ಮೂಲತಃ ಗುಜರಾತ್‍ನವರಾಗಿದ್ದು, 1942ರ ಅಕ್ಟೋಬರ್ 2ರಂದು ಜನಿಸಿದರು. ತಾಯಿ ಸುಧಾ ಅಖ ಸಲ್ಮಾ ಪರೇಖ್ ತಂದೆ ಬಚ್ಚುಬಾಯಿ ಪರೇಖ್ ಅವರ ಪುತ್ರಿಯಾಗಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು 1952ರಲ್ಲಿ ತಮ್ಮ 10ನೇ ವಯಸ್ಸಿಗೆ ಮಾ ಚಿತ್ರದ ಮೂಲಕ ಚಿತ್ರರಂಗದ ಪ್ರವೇಶಿಸಿದರು. ಬಾಪ್-ಬೇಟಿ ಚಿತ್ರದಲ್ಲಿ ನಟಿಸಿದ್ದರು. 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಮರು ಪ್ರವೇಶ ಪಡೆದ ಅವರು, ಅಂದಿನಿಂದ ನಿರಂತರವಾಗಿ ಸಿನಿ ಪಯಣವನ್ನು ಮುಂದುವರೆಸಿದ್ದಾರೆ.

ಬಾಲಿವುಡ್‍ನ ಹಲವು ದಿಗ್ಗಜರ ಜೊತೆ ನಟಿಸಿದ್ದಾರೆ. ನಾಯಕಿ ನಟಿಯಾಗಿ, ಪೋಷಕ ನಟಿಯಾಗಿ ಹಲವು ಪಾತ್ರಗಳಿಗೆ ಜೀವ ತುಂಬಿರುವ ಆಶಾ ಪರೇಖ್ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ 60-70ನೇ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಯಶಸ್ವಿ ನಟಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಪದ್ಮಶ್ರೀ, ಫಿಲ್ಮ್ ಫೇರ್ ಅವಾರ್ಡ್, ಕಲಾಕಾರ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಈಗ ದಾದಾ ಸಾಹೇಬ್ ಫಾಲ್ಕೆಗೆ ಭಾಜನರಾಗುವ ಮೂಲಕ ಉನ್ನತ ಗೌರವ ಪಡೆದಿದ್ದಾರೆ.

Articles You Might Like

Share This Article