ನವದೆಹಲಿ, ಫೆ.21- ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ (ಐಫಾ) ಪ್ರಕಟವಾಗಿದ್ದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾಮಂದಣ್ಣ ನಟನೆಯ `ಪುಷ್ಪ’ ಚಿತ್ರವು ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ಪಾಕಿಸ್ತಾನ ಹಾಗೂ ಭಾರತದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನು ಕೇಂದ್ರಿಕೃತವಾಗಿ ಚಿತ್ರಿತವಾಗಿದ್ದ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಶೇರ್‍ಶಾ, ಜಾಲಿಯಾನ ವಾಲಬಾಗ್ ಹತ್ಯಾಕಾಂಡವನ್ನು ಕೇಂದ್ರಿಕೃತವಾಗಿಸಿಕೊಂಡು ಸಿನಿಮಾ ರೂಪ ಪಡೆದಿದ್ದ ವಿಕ್ಕಿ ಕೌಶಲ್ ಅಭಿನಯದ ಸರ್ದಾರ್ ಉದ್ದಾಂ ಸಿಂಗ್ ಚಿತ್ರಗಳು ವಿಮರ್ಶಕರ ಹಾಗೂ ಪ್ರೇಕ್ಷಕರ ಅತ್ಯುತ್ತಮ ಚಿತ್ರವಾಗಿ ಪ್ರಕಟಗೊಂಡಿದೆ.
ಕಪಿಲ್‍ದೇವ್ ನಾಯಕತ್ವದ ಭಾರತ ತಂಡವು 1983ರಲ್ಲಿ 2 ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್‍ಇಂಡೀಸ್ ತಂಡವನ್ನು ಸೋಲಿಸಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು, ಇದೇ ಕಥಾವಸ್ತುವನ್ನು ಆಗಿಸಿಕೊಂಡು ತೆರೆಗೆ ಬಂದಿದ್ದ ರಣವೀರ್‍ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 83ನೆ ಚಿತ್ರವು ಚಿತ್ರಮಂದಿರದಲ್ಲಿ ಸೋಲು ಕಂಡೂ ನಿರಾಸೆ ಮೂಡಿಸಿದರೂ ಈ ಚಿತ್ರದ ನಟನೆಗಾಗಿ ರಣವೀರ್‍ಸಿಂಗ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪೂರ್ಣ ವಿವರ:
* ಅತ್ಯುತ್ತಮ ಚಿತ್ರ: ಪುಷ್ಪ ದಿ ರೈಸ್
* ಅತ್ಯುತ್ತಮ ನಟ: ರಣವೀರ್ ಸಿಂಗ್ (83)
* ಅತ್ಯುತ್ತಮ ನಟಿ: ಕೀರ್ತಿ ಸೊನೊನ್ (ಮಿಮಿ)
* ಜೀವಮಾನ ಶ್ರೇಷ್ಠ ಪ್ರಶಸ್ತಿ ಆಶಾ ಪರೇಖ್
* ಉತ್ತಮ ನಿರ್ದೇಶಕ: ಕೆನ್ ಘೋಷ್ (ಟೆಂಪಲ್ ಅಟ್ಯಾಕ್)
* ಉತ್ತಮ ಛಾಯಾಗ್ರಾಹಕ: ಜಯಕೃಷ್ಣಗುಮಡಿ (ಹಸೀನಾ ದಿಲ್‍ರುಬಾ)
*ಉತ್ತಮ ಪೋಷಕ ನಟ : ಸತೀಶ್ ಕೌಶಿಕ್ (ಕಾಗಜ್)
* ಉತ್ತಮ ಪೋಷಕ ನಟಿ : ಲಾರಾದತ್ತ (ಬಾಟಮ್)
* ಉತ್ತಮ ಖಳನಟ ಆಯುಷ್ ಶರ್ಮಾ ( ಅಂತಿಮ್)
* ಜನಪ್ರಿಯತೆ ಪಡೆದ ಚಿತ್ರ : ಶೇರ್‍ಶಾ
* ಜನಪ್ರಿಯತೆ ಪಡೆದ ನಟ : ಅಭಿಮನ್ಯು ದಸನ್ನಿ
* ಜನಪ್ರಿಯತೆ ಪಡೆದ ನಟಿ
: ರಾಕಾ ಮಂದನಾ
* ವಿಮರ್ಶಕರ ಚಿತ್ರ ಸರ್ದಾರ್ ಉದ್ದಾಂಸಿಂಗ್
* ವಿಮರ್ಶಕರ ನಟ ಸಿದ್ಧಾರ್ಥ್ ಮಲ್ಹೋತ್ರಾ (ಶೇರ್‍ಶಾ)
* ವಿಮರ್ಶಕರ ನಟಿ ಕಿಯಾರಾ ಅದ್ವಾನಿ (ಶೇರ್ ಶಾ)
* ಉದಯೋನ್ಮುಖ ನಟ ಆಯಾನ್‍ಶೆಟ್ಟಿ (ತಡಪ್)
* ಉತ್ತಮ ವೆಬ್ ಸೀರಿಸ್: ಕ್ಯಾಂಡಿ
* ಉತ್ತಮ ವೆಬ್ ಸೀರಿಸ್ ನಟ ಮನೋಜ್ ಬಾಜಪೇಯಿ (ದಿ ಫ್ಯಾಮಿಲಿ ಮ್ಯಾನ್ 2)
* ಉತ್ತಮ ವೆಬ್ ಸೀರಿಸ್ ನಟಿ ರವೀನಾ ಟಂಡನ್ ( ಆರ್ಯನಕ್)
* ಉತ್ತಮ ಗಾಯಕ:ವಿಶಾಲ್ ಮಿಶ್ರಾ
* ಉತ್ತಮ ಗಾಯಕಿ: ಕನ್ನಿಕಾ ಕಪೂರ್
* ಉತ್ತಮ ಕಿರು ಚಿತ್ರ:ಪೌಲಿ
