ಕರಾವಳಿ ಭಾಗದಲ್ಲಿ ಹಂದಿಜ್ವರ ಹಾವಳಿ, ಎಚ್ಛೆತ್ತುಕೊಂಡ ಜಿಲ್ಲಾಡಳಿತ

Social Share

ಮಂಗಳೂರು,ನ.5- ದಕ್ಷಿಣ ಕರಾವಳಿ ಭಾಗದಲ್ಲಿ ಹಂದಿಜ್ವರ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಕೆಲಾರೈ ಸಮೀಪ ನೀರಂಮಾರ್ಗ ಗ್ರಾಮದ ಹಂದಿ ಸಾಗಾಣಿಕೆ ಕೇಂದ್ರದಲ್ಲಿ ಹಂದಿಜ್ವರ ಕಾಣಿಸಿಕೊಂಡಿದ್ದು ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾಧಿಕಾರಿ ಎಂಆರ್ ರವಿಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಆತಂಕಪಡುವ ಅಗತ್ಯವಿಲ್ಲ. ಹಂದಿಜ್ವರ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಸರಿಯಾಗಿ ಬೇಯಿಸಿದ ಹಂದಿ ಮಾಂಸ ಸೇವನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ

ನೀರಂಮಾರ್ಗ ಹೊರವಲಯದಲ್ಲಿ ಪ್ರಕಾಶ್ ಎಂಬುವರಿಗೆ ಸೇರಿದ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೆಲ ದಿನಗಳಿಂದ ಜ್ವರ ಹಾಗೂ ಇತರ ರೋಗ ಲಕ್ಷಣಗಳು ಕಂಡಬಂದಿತ್ತು. ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಹಂದಿಜ್ವರ ಇರುವುದು ಸ್ಪಷ್ಟವಾಗಿದೆ.

ಈ ಕಾರಣದಿಂದಾಗಿ ಸಾಕಾಣಿಕೆ ಕೇಂದ್ರದಲ್ಲಿದ್‍ದ 120 ಹಂದಿಗಳು ಸಾವನ್ನಪ್ಪಿವೆ. ಉಳಿದ ಹಂದಿಗಳನ್ನು ಮುಂಜಾಗ್ರತಾ ಕ್ರಮವಾಗಿ ಹತ್ಯೆ ಮಾಡಲಾಗಿದೆ. ಒಂದು ಕಿ.ಮೀ ಸುತ್ತಳತೆಯಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. 10 ಕಿ.ಮೀ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ ರೆಡ್‍ಜೋನ್ ಘೋಷಿಸಲಾಗಿದೆ.

Articles You Might Like

Share This Article