ಅಹಿಂಸೆ, ಮಾತುಕತೆಯೇ ಸಂಘರ್ಷಕ್ಕೆ ಪರಿಹಾರ : ದಲೈಲಾಮ

Social Share

ಧರ್ಮಶಾಲಾ, ಫೆ28- ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಸೋಮವಾರ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಕಳವಳ ವ್ಯಕ್ತಪಡಿಸಿದ್ದು, ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಉತ್ತಮವಾಗಿ ಪರಿಹರಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಸಂಘರ್ಷದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ ಎಂದಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈಲಾಮಾ, ನಮ್ಮ ಪ್ರಪಂಚವು ಪರಸ್ಪರ ಅವಲಂಬಿತವಾಗಿದೆ, ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಅನಿವಾರ್ಯವಾಗಿ ಉಳಿದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯುದ್ಧವು ಹಳೆಯದು – ಅಹಿಂಸೆ ಒಂದೇ ದಾರಿ ಎಂದಿದ್ದಾರೆ.
ನಾವು ಇತರ ಮಾನವರನ್ನು ಸಹೋದರ ಸಹೋದರಿಯರಂತೆ ಪರಿಗಣಿಸುವ ಮೂಲಕ ಮಾನವೀಯತೆಯ ಏಕತೆಯ ಪ್ರe್ಞÉಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯಾಗಿ ನಾವು ಹೆಚ್ಚು ಶಾಂತಿಯುತ ಜಗತ್ತನ್ನು ನಿರ್ಮಿಸಬೇಕು.
ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಸಂಭಾಷಣೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಪರಸ್ಪರ ತಿಳುವಳಿಕೆ ಮತ್ತು ಪರಸ್ಪರರ ಯೋಗಕ್ಷೇಮವನ್ನು ಗೌರವಿಸುವ ಮೂಲಕ ನಿಜವಾದ ಶಾಂತಿ ಉಂಟು ಮಾಡಬೇಕು ಎಂದು ದಲೈಲಾಮಾ ಹೇಳಿದ್ದಾರೆ.
ಉಕ್ರೇನ್‍ನಲ್ಲಿ ಶಾಂತಿ ಶೀಘ್ರವಾಗಿ ಮರುಸ್ಥಾಪಿಸಲ್ಪಡುತ್ತದೆ ಎಂದು ಅವರು ಆಶಿಸುತ್ತಾ, ¾¾ನಾವು ಭರವಸೆಯನ್ನು ಕಳೆದುಕೊಳ್ಳಬಾರದು. 20 ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. 21 ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು.

Articles You Might Like

Share This Article