ದಲಿತ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನು ಕಬಳಿಕೆ

Social Share

ಬೆಂಗಳೂರು, ಮಾ, 18;ದಲಿತ ಕುಟುಂಬಕ್ಕೆ ಸೇರಿದ ಹತ್ತಾರು ಕೋಟಿ ರೂಪಾಯಿ ಬೆಲೆಬಾಳುವ ಸುಮಾರು 10 ಎಕರೆ ಜಮೀನಿಗೂ ಮೇಲ್ಪಟ್ಟು ಆಸ್ತಿಯನ್ನು ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಎಸ್.ಐ.ಆರ್.ಆರ್.ನ ಅಧ್ಯಕ್ಷ ಸಿ. ಮುನಿರಾಜು ಕಬಳಿಸಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ ಇಂದು ಆಪಾದಿಸಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಯೋಜಿಕ ಮಾರಸಂದ್ರ ಮುನಿಯಪ್ಪ, ಮುನಿರಾಜು,ಅನ್ ಟಿ.ಎಂ. ಚಿನ್ನಪ್ಪ ಇವರು ದೊಡ್ಡ ತಿಮ್ಮಸಂದ್ರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು ಇಲ್ಲಿ ವಾಸವಾಗಿದ್ದು, ಇವರು ಸುಮಾರು 30 ಕೋಟಿಗೂ ಅಧಿಕ ಬೆಲೆಬಾಳುವ 10 ಎಕರೆ ಜಮೀನನ್ನು ಸರ್ಜಾಪುರ ಹೋಬಳಿಯ ತಿಂಡ್ಲು ಗ್ರಾಮದಲ್ಲಿ ವಾಸವಾಗಿರುವ ಶ್ರೀ. ಟಿ.ಎಸ್.ಗೋಪಾಲ್ ಅವರಿಂದ ಒಪ್ಪಂದ ಕರಾರು ಪತ್ರದ ಮೂಲಕ 10 ಎಕರೆ ಜಮೀನನ್ನು ತನ್ನ ವಶಕ್ಕೆ ಪಡೆದು ಸುಮಾರು 3,75.00,000/ ರೂಗೆ ಚೆಕ್ ನೀಡಿ ಹಣಪಾವತಿಯನ್ನು ತಡೆಹಿಡಿಯಲು ಬ್ಯಾಂಕ್ಗೆ ಸೂಚನೆ ನೀಡುವ ಮೂಲಕ ನಂಚಬಿಕೆದ್ರೋಹ, ವಂಚನೆ ಮಾಡಿದ್ದಾರೆ.

ದೆಹಲಿಯಲ್ಲಿ ವಿದೇಶಿ ಪ್ರಜೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಜೊತೆಗೆ ಇದೇ ಜಮೀನಿನ ಹಿಂದೆ ತಾನು ಹೊಸದಾಗಿ ನಿರ್ಮಿಸಿರುವ 16 ಎಕರೆ ಲೇಔಟ್ಗೆ ಹೋಗಲು ಸಂಪರ್ಕ ರಸ್ತೆಗಾಗಿ ಸರ್ಜಾಪುರ-ಬಾಗಲೂರು ರಸ್ತೆಗೆ ಇದ್ದ ದಲತ ಅಮ್ಮಯ್ಯಮ್ಮ ಕೋಂ ದೊಡ್ಡನಂಜಪ್ಪರವರ ಜಮೀನನ್ನು ಮುಗಳೂರು ಗ್ರಾಮ ರಸ್ತೆ ಮಾಡಲು ಮುಂಚಿತವಾಗಿ ನೀಡಿರುವಂತೆ ದಾಖಲೆ ಸೃಷ್ಟಿಸಿ, ಈ ಜಮೀನನ್ನೂ ಸಹ ವಶಪಡಿಸಿಕೊಂಡು ವಂಚನೆ ಮಾಡಿರುತ್ತಾರೆ, ಇದು ಕಾನೂನುಬಾಹಿರ ಎಂದರು.

ಅಲ್ಲದೆ ಇದೇ ತಿಂಡ್ಲು ಗ್ರಾಮದ ನಿವಾಸಿ ಯಲ್ಲಮ್ಮ ಕೋಂ ಲೇಟ್, ಚಿಕ್ಕನಂಜಪ್ಪರವರ 36 ಗುಂಟೆ ಜಮೀನನ್ನೂ ಸಹ ವಶಪಡಿಸಿಕೊಂಡು ಸಿ. ಮುನಿರಾಜು ಮತ್ತು ದೇವರಾಜ ಪಾಟೀಲ್ ಇವರು ಎಂ.ಜೆ.ಆರ್, ಅಲ್ಡರ್ಸ್ಗೆ ಸುಮಾರು 3,50,00,000/- (ಮೂರು ಕೋಟಿ ಐವತ್ತು ಲಕ್ಷ) ರೂಪಾಯಿಗಳಿಗೆ ಮಾರಾಟ ಮಾಡಿ ಯಲ್ಲಮ್ಮ ಕೋಂ ಚಿಕ್ಕನಂಜಪ್ಪ ಅವರು ವಾಸವಾಗಿದ್ದ ಜಮೀನಿನಲ್ಲಿ ಶೀಟ್ ಮನೆಯನ್ನು ಕಟ್ಟಕೊಂಡಿದ್ದು, ಈ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿ ಆ ಕುಟುಂಬವನ್ನು ಬೀದಿಪಾಲು ಮಾಡಿದ್ದಾರೆ. ಈ ದಂತ ಕುಟುಂಬಕ್ಕೆ ಪರಿಹಾರ ನೀಡದೆ ಸಿ. ಮುನಿರಾಜು ಮತ್ತು ಎಂ. ದೇವರಾಜ ಪಾಟೀಲ್ ವಂಚನೆ ಮಾಡಿದ್ದಾರೆ.

ಸಿ. ಮುನಿರಾಜು ಅವರ ಅಕ್ರಮಗಳು, ಚೆಕ್ ಬೌನ್ಸ್ ಪ್ರಕರಣ ಮತ್ತು ದಲತರ ಭೂಕಬಳಕೆಯ ಬಗ್ಗೆ ಎಲ್ಲಾ ದಾಖಲೆಗಳೊಂದಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಜೆ.ಪಿ.ನಡ್ಡಾರವರಿಗೆ, ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮೀತ್ ಶಾರವರಿಗೆ, ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ರವರಿಗೆ, ಬಿಜೆಪಿಯ ರಾಜ್ಯಾಧ್ಯಕ್ಷರಾದ ಶ್ರೀ. ನಳೀನ್ ಕುಮಾರ್ ಕಟೀಲ್ರವರಿಗೆ,

ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ. ಬಸವರಾಜ ಬೊಮ್ಮಾಯಿರವರಿಗೆ, ಬಿಜೆಪಿ ಹಿರಿಯ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳು ಶ್ರೀ., ಬಿ.ಎಸ್. ಯಡಿಯೂರಪ್ಪ ಇವರಿಗೆ ಒತ್ತಾಯಿಸಲಾಗಿದೆ. ಹಾಗೂ ಬೆಂಗಳೂರು ಕೇಂದ್ರ ವಲಯದ ಐ.ಜಿ.ಪಿರವರಿಗೆ ದೂರು ಸಲ್ಲಿಸಿ, ತನಿಖೆಗೆ ಒತ್ತಾಯಿಸಲಾಗಿದೆ.

ತಿಗಳ ಸಮುದಾಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಅವಕಾಶ ಕಲ್ಪಿಸಿ

ಅಲ್ಲದೆ, ಸಿ, ಮುನಿರಾಜು ಇವರು ಕರ್ನಾಟಕದ ಮುಂಬರುವ ಚುನಾವಣಿಯಲ್ಲಿ ಅರಪಿಯಿಂದ ಭಾಗೇಪಲ್ಲ ಕ್ಷೇತ್ರದಲ್ಲಿ ಸ್ಪರ್ಧಿಯಾಗಲು ಆಕಾಂಕ್ಷಿಯಾಗಿದ್ದು, ಇಂತಹ ಭ್ರಷ್ಟ ವ್ಯಕ್ತಿಯನ್ನು ಬಿಜೆಪಿ ಪಕ್ಷ ಸ್ಪರ್ದಿಸಲು ಅವಕಾಶ ನೀಡಬಾರದೆಂದು ಬಹುಜನ ಪಕ್ಷ ಆಗ್ರಹಿಸಿತು

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್ ಮುನಿಯಪ್ಪ,ಸಿ.ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.

Dalit, family, land, Bahujan Samaj Party,

Articles You Might Like

Share This Article