ದಲಿತರ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಮೂವರ ಬಂಧನ

Spread the love

ಗುನಾ, ಮೇ 2 ಮಧ್ಯಪ್ರದೇಶದ ಗುನಾ ಜಿಲ್ಲೆಯ ಸ್ಮಶಾನದಲ್ಲಿ ಎತ್ತರದ ವೇದಿಕೆಯಲ್ಲಿ ದಲಿತರ ಅಂತ್ಯಕ್ರಿಯೆ ಮಾಡುವುದನ್ನು ಕೆಲವರು ತಡೆದ ಆರೋಪಕ್ಕಾಗಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ತೀವ್ರ ವಿರೋಧದ ಬಳಿಕ ದಲಿತರ ವೇದಿಕೆ ಸಮೀಪದ ಜಮೀನಿನಲ್ಲಿ ಕುಟುಂಬಸ್ಥರು ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದಾರೆ. ಗುನಾ ಜಿಲ್ಲಾ ಕೇಂದ್ರದಿಂದ 62 ಕಿಮೀ ದೂರದಲ್ಲಿರುವ ಕುಂಭರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್‍ಪುರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂತ್ಯಕ್ರಿಯೆಗಾಗಿ ಸ್ಮಶಾನದ ವೇದಿಕೆಯನ್ನು ಬಳಸಲು ದಲಿತರಿಗೆ ಅನುಮತಿಯಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಸ್ಥಳೀಯ ನಿವಾಸಿ ಕನ್ಹಯ್ಯ ಅಹಿರ್ವಾರ್ (70) ಮೃತಪಟ್ಟಿದ್ದರು. ಕುಟುಂಬ ಸದಸ್ಯರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದರು, ಆದರೆ ಗ್ರಾಮದ ಮೂವರು ಸಂಸ್ಕಾರ ವೇದಿಕೆಯಲ್ಲಿ ಅಂತಿಮ ವಿವಿಧಾನಗಳನ್ನು ಮಾಡದಂತೆ ತಡೆದರು ಎಂದು ಕುಂಭರಾಜ್ ಪೊಲೀಸ್ ಠಾಣೆ ಪ್ರಭಾರಿ ಸಂಜೀತ್ ಮಾವಾಯಿ ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಾರಾಯಣ ಸಿಂಗ್ ಮೀನಾ, ರಾಮ್‍ಭರೋಸ್ ಮೀನಾ ಮತ್ತು ದಿಲೀಪ್ ಮೀನಾ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಸಲಾಗಿದೆ. ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments