lಗುಣಾ,ಫೆ.8- ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಮೊಬೈಲ್ ಕದ್ದ ಶಂಕೆಯ ಮೇಲೆ ಇಬ್ಬರು ವ್ಯಕ್ತಿಗಳು ದಲಿತ ವ್ಯಕ್ತಿಯೊಬ್ಬನನ್ನು ವಿವಸ್ತ್ರಗೊಳಿಸಿ ದೊಣ್ಣೆ ಮತ್ತು ಸುಟ್ಟ ಮರದ ದಿಮ್ಮಿಗಳಿಂದ ಥಳಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಲಾಡ್ಪುರ ಗ್ರಾಮದಲ್ಲಿ ನಡೆದಿರುವ ಮಾಹಿತಿ ಇದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಒಬ್ಬ ವ್ಯಕ್ತಿಯನ್ನು ಥಳಿಸಿ, ನಿಂದಿಸುತ್ತಿದ್ದಾರೆ. ಉಳಿದಂತೆ ಸುತ್ತಲು ನಿಂತವರು ಮೂಕ ಪ್ರೇಕ್ಷಕರಾಗಿದ್ದಾರೆ. ಥಳಿತಕ್ಕೆ ಒಳಗಾದ ವ್ಯಕ್ತಿ ಪೊಲೀಸ್‍ರಿಗೆ ದೂರು ನೀಡಿದ್ದಾರೆ.
ಮೊಬೈಲ್ ಫೋನ್ ಕದ್ದಿದ್ದಾನೆಂದು ಆರೋಪಿಸಿ ದೊಣ್ಣೆ ಮತ್ತು ಸುಡುವ ಮರದ ದಿಮ್ಮಿಗಳಿಂದ ಥಳಿಸಲಾಗಿದೆ ಎಂದು ವಿಜಯನಗರ ಪೊಲೀಸ್ ಠಾಣೆ ಪ್ರಭಾರಿ ರಾಕೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಆರೋಪಿಗಳನ್ನು ಹೆತ್ರಾಮ್ ಗುರ್ಜರ್ ಮತ್ತು ಗೋಲು ಮುಸಲ್ಮಾನ್ ಎಂದು ಗುರುತಿಸಲಾಗಿದೆ. ದೂರು ದಾಖಲಾದ ಒಂದು ಗಂಟೆಯೊಳಗೆ ಗುರ್ಜರ್ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
