ಮಹಿಳೆಯ ಅತ್ಯಾಚಾರಕ್ಕೆ ಯತ್ನ, ಆರೋಪಿಗಳ ಪತ್ತೆಗೆ ತಂಡ ರಚನೆ

Spread the love

ಶಿವಮೊಗ್ಗ, ಮೇ 12- ಪತಿಯೊಂದಿಗೆ ಬರುತ್ತಿದ್ದ ಮಹಿಳೆಯ ಅಡ್ಡಗಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್‍ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಆರೋಪಿಗಳು ತೀರ್ಥಹಳ್ಳಿ ವ್ಯಾಪ್ತಿಯ ಹಗಿಲು ಬಾಗಿಲು ಗ್ರಾಮದ ನಿವಾಸಿಗಳಾದ ಸಂಪತ್ ಮತ್ತು ಆದರ್ಶ ಹಾಗೂ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.

ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಮದರ ದಲಿತ ಮಹಿಳೆ ಗಂಡನ ಜೊತೆ ಬರುತ್ತಿದ್ದಾಗ ಆರೋಪಿಗಳಾದ ಸಂಪತ್ ಮತ್ತು ಆದರ್ಶ ಅವರುಗಳು ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯ ಪತಿಗೆ ಹೊಡೆದು ಮಹಿಳೆ ಮಾನಹಾನಿಗೆ ಯತ್ನಿಸಿದ್ದಾರೆ.

ಮಹಿಳೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು, ಈ ಬಗ್ಗೆ ಮಹಿಳೆ ನೀಡಿರುವ ದೂರನ್ನು ತೀರ್ಥಹಳ್ಳಿ ಠಾಣೆ ಪೊಲೀಸರು ಪಡೆದುಕೊಂಡು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆಂದು ಎಸ್‍ಪಿ ವಿವರಿಸಿದರು.

Facebook Comments