ನವದೆಹಲಿ,ಮಾ.12- ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಅನ್ಯಾಯದ ವಿರುದ್ಧ ನೆನಪಿನಲ್ಲಿ ಉಳಿಯುವ ಪರಿಣಾಮಕಾರಿ ಹೋರಾಟವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಮಾರ್ಚ್ 12ರಂದು ದಂಡಿ ಚಳವಳಿಯ ಮಾರ್ಚ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಚಳವಳಿಯಲ್ಲಿ ಭಾಗವಹಿಸಿದ್ದ ಮಹಾತ್ಮಾ ಗಾಂಧಿ ಸೇರಿದಂತೆ ಎಲ್ಲರಿಗೂ ಗೌರವ ಸಲ್ಲಿಸಿದ್ದಾರೆ.
ದಂಡಿ ಚಳವಳಿ ಅನ್ಯಾಯದ ವಿರುದ್ಧ ನೆನಪಿನಲ್ಲಿ ಉಳಿಯುವ ದೃಢವಾದ ಹೋರಾಟವಾಗಿದೆ. ಉಪ್ಪಿನ ಸತ್ಯಾಗ್ರಹ ಎಂದು ಕರೆಯಲ್ಪಡುವ 1930 ರ ದಂಡಿ ಆಂದೋಲನ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ ಎಂದಿದ್ದಾರೆ.
ಮೋದಿ ರೋಡ್ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು
ಬ್ರಿಟಿಷ್ ಆಡಳಿತದ ವಿರುದ್ಧ ಅಸಹಕಾರ ಚಳವಳಿಯ ಭಾಗವಾಗಿ, ಗಾಂಧಿ ನೇತೃತ್ವದಲ್ಲಿ ಸತ್ಯಾಗ್ರಹಿಗಳು ಅಹಮದಾಬಾದ್‍ನ ಸಬರಮತಿ ಆಶ್ರಮದಿಂದ 1930ರ ಮಾರ್ಚ್ 12 ರಿಂದ ಏಪ್ರಿಲ್ 5ರವರೆಗೆ ದಂಡಿ ಎಂಬ ಕರಾವಳಿ ಗ್ರಾಮಕ್ಕೆ ಮೆರವಣಿಗೆ ನಡೆಸಿದರು. ಬ್ರಿಟಿಷರು ಸಮುದ್ರದ ನೀರಿನಿಂದ ತಯಾರಿಸಿದ ಉಪ್ಪಿಗೆ ತೆರಿಗೆ ವಿಧಿಸಿದ್ದನ್ನು ಪ್ರಬಲವಾಗಿ ವಿರೋಧಿಸಿದರು.
Dandi March, remembered, determined, effort, against, injustice, PM Modi,