ಡೇಂಜರ್ ಸಿಟಿಯಾಗಿ ಬದಲಾದ ಸಿಲಿಕಾನ್ ಸಿಟಿ ಬೆಂಗಳೂರು..!

Social Share

ಬೆಂಗಳೂರು, ಜ.8-ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದನ್ನು ನೋಡಿದರೆ ಬೆಂಗಳೂರು ಡೇಂಜರ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿರುವುದರ ಮುನ್ಸೂಚನೆಯಂತಿದೆ. ಕಳೆದ ಐದು ದಿನಗಳಲ್ಲಿ ಬರೊಬ್ಬರಿ 24 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಈ ಭೀತಿ ಎದುರಾಗಿದೆ.
ಕಳೆದ 24 ಗಂಟೆಗಳಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.ನಿನ್ನೆ ನಗರದಲ್ಲಿ 6613 ಸೋಂಕಿತರು ಪತ್ತೆಯಾಗಿದ್ದರು ಇಂದು ಸೋಂಕಿತರ ಸಂಖ್ಯೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳಿವೆ.
ಇಂದು 7113 ಮಂದಿಗೆ ಸೋಂಕು ತಗುಲುವ ಸಾಧ್ಯತೆಗಳಿದ್ದು, ಕಳೆದ ಐದು ದಿನಗಳಲ್ಲಿ 24 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.ಈ ಅಂಕಿ ಅಂಶಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವುದು ನಿಶ್ಚಿತವಾಗಿರುವುದರಿಂದ ನಗರದಲ್ಲಿ ವಾಸಿಸುತ್ತಿರುವ ಜನರು ಭಾರಿ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ.
ಇಡೀ ದೇಶದಲ್ಲೇ ದೆಹಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಅಪಖ್ಯಾತಿಗೆ ಒಳಗಾಗಿದ್ದರೆ ಬೆಂಗಳೂರು ಅತಿ ಹೆಚ್ಚು ಸೋಂಕಿತರಿರುವ ಎರಡನೆ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ದಿನೇ ದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಸೋಂಕು ಸಮುದಾಯಕ್ಕೆ ಹರಡಿದ್ಯಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Articles You Might Like

Share This Article