ಚಾಲೆಂಜಿಂಗ್ ಸ್ಟಾರ್ ಕರೆಗೆ ಹರಿದುಬಂತು ವನ್ಯ ಜೀವಿಗಳಿಗೆ ನೆರವಿನ ಮಹಾಪೂರ

Spread the love

ಬೆಂಗಳೂರು, ಜೂ.6- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ಕರೆಯಿಂದ ರಾಜ್ಯದ ಪ್ರಾಣಿ ಸಂಗ್ರಹಾಲಯದ ವನ್ಯ ಜೀವಿಗಳ ನಿರ್ವಹಣೆಯ ವೆಚ್ಚದ ಸಮಸ್ಯೆ ತಾತ್ಕಾಲಿಕವಾಗಿ ಬಗೆ ಹರಿದಿದ್ದು, ನೆರವಿನ ಮಹಾಪೂರವೇ ಹರಿದು ಬರಲಾರಂಭಿಸಿದೆ. ಕೊರೊನಾದಿಂದ ಮನುಷ್ಯರಿಗೆ ಮಾತ್ರವಲ್ಲಿ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗಿದೆ.

ರಾಜ್ಯದಲ್ಲಿ ಒಂಬತ್ತು ಪ್ರಾಣಿ ಸಂಗ್ರಹಾಲಯಗಳಿದ್ದು, ಸುಮಾರು 5 ಸಾವಿರ ವನ್ಯ ಜೀವಿಗಳಿಗೆ. ಪ್ರವಾಸಿಗರು ನೀಡುವ ಶುಲ್ಕದಿಂದ ಅವುಗಳ ನಿರ್ವಹಣೆಯಾಗುತ್ತಿತ್ತು. ಈಗ ಲಾಕ್ ಡೌನ್ ನಿಂದ ಪ್ರವಾಸಿಗರು ಬರುತ್ತಿಲ್ಲ, ಆದಾಯ ಇಲ್ಲದೆ ವನ್ಯ ಜೀವಿಗಳ ನಿರ್ಹವಣೆ ಕಷ್ಟವಾಗಿದೆ ಎಂದು ಜೂನ್ 5ರಂದು ದರ್ಶನ್ ವಿಡಿಯೋ ಸಂದೇಶದಲ್ಲಿ ವಿವರಿಸಿದರು.

ಎಲ್ಲರೂ ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕಲಾಗಲ್ಲ, ಅದಕ್ಕಾಗಿ ಮೃಗಾಲಯಗಳಲ್ಲಿರುವ ಪ್ರಾಣಿ ಪಕ್ಷಗಳನ್ನು ದತ್ತು ಪಡೆಯಬಹುದು. ರಾಜ್ಯ ಸರ್ಕಾರ ಝೂ ಆಫ್ ಕರ್ನಾಟಕ ಆ್ಯಪ್ ಮೂಲಕ ದತ್ತು ಸ್ವೀಕಾರ ಪ್ರಕ್ರಿಯೆಗಳನ್ನು ಸರಳಗೊಳಿಸಿದೆ. ಲವ್ ಬರ್ಡ್ ಗೆ ಒಂದು ಸಾವಿರ, ಹುಲಿಗೆ ಒಂದು ಲಕ್ಷ, ಾನೆಗೆ ಒಂದು ಲಕ್ಷದ 70 ಸಾವಿರ ಹೀಗೆ ಬೇರೆ ಬೇರೆ ಪ್ರಾಣಿಗಳಿಗೆ ಬೇರೆ ರೀತಿಯ ಹಣ ಪಾವತಿಸಿ ಆನ್ ಲೈನ್ ಮೂಲಕವೇ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯಬಹುದು, ಆನ್ ಲೈನ್ ನಲ್ಲೇ ಲಭ್ಯವಾಗುವ ಪ್ರಮಾಣ ಪತ್ರ ಪಡೆದು ಆದಾಯ ತೆರಿಗೆ ಪಾವತಿಯಿಂದ ಶೇ.50ರಷ್ಟು ವಿನಾಯಿತಿಯನ್ನು 80 ಜಿ ಪ್ರಕಾರ ಪಡೆಯಬಹುದು ಎಂದು ಹೇಳಿದ್ದರು.

ದರ್ಶನ್ ಅವರ ೀ ವಿಡಿಯೋ ಭಾರೀ ವೈರಲ್ ಆಗಿತ್ತು. ಕಳೆದ ಎರಡು ದಿನಗಳಲ್ಲಿ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಮೃಗಾಲಯಗಳಿಗೆ 25 ಲಕ್ಷ ರೂಪಾಯಿ ಸಂಗ್ರಹವಾಗಿದೆ. ದತ್ತು ಪ್ರಕ್ರಿಯೆ ಮುಂದುವರೆದಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಬೆಳಗಾವಿ ಮೃಗಾಯಲಕ್ಕೆ 32,689 ರೂ, ಗದಗ ಮೃಗಾಲಯಕ್ಕೆ 38,939 ರೂ. ಕಲ್ಬುರ್ಗಿ ಮೃಗಾಯಲಕ್ಕೆ 48,383 ರೂ, ದಾವಣಗೆರೆ ಮೃಗಾಲಯಕ್ಕೆ 62,974 ರೂ., ಹಂಪಿ ಮೃಗಾಲಯಕ್ಕೆ 64,089 ರೂ, ಚಿತ್ರದುರ್ಗ ಮೃಗಾಲಯಕ್ಕೆ 30 ಸಾವಿರ, ಬನ್ನೆರುಘಟ್ಟ ಮೃಗಾಯಲಯಕ್ಕೆ 7,30 ಲಕ್ಷ, ಶಿವಮೊಗ್ಗ ಮೃಗಾಯಲಯಕ್ಕೆ 1 ಲಕ್ಷ, ಮೈಸೂರು ಮೃಗಾಯಲಯಕ್ಕೆ 13.66 ಲಕ್ಷ ಸೇರಿ ಸುಮಾರು 25 ಲಕ್ಷ ರೂಪಾಯಿ ನಿನ್ನೆವರೆಗೆ ಸಂಗ್ರಹವಾಗಿದೆ.

ದರ್ಶನ್ ಅವರು ಕರೆ ನೀಡಿದ ಜೂನ್ 5ರಂದು ಕೇವಲ 8.65 ಲಕ್ಷ ಮಾತ್ರ ಸಂಗ್ರಹವಾಗಿತ್ತು, ನಿನ್ನೆ ಅದು ದಿಡೀರ್ ಏರಿಕೆಯಾಗಿದ್ದು 16 ಲಕ್ಕೂ ಮೇಲ್ಪಟ್ಟು ಹಣ ಸಂಗ್ರಹವಾಗಿದೆ. ಇಂದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ದರ್ಶನ್ ವಿಡಿಯೋ ಸಂದೇಶ ನೀಡಿ ಸುಮ್ಮನಾಗದೆ ದತ್ತು ಪಡೆದವರು ತಮ್ಮ ಪ್ರಮಾಣಪತ್ರವನ್ನು ತಲುಪಿಸಿದರೆ ಅದನ್ನು ಟ್ವಿಟ್ ಮೂಲಕ ಪ್ರಕಟಿಸಿ ದಾನಿಗಳಿಗೆ ಧನ್ಯವಾದ ಹೇಳುವ ಮೂಲಕ ಮತ್ತಷ್ಟು ಜನರು ದತ್ತು ಪಡೆಯಲು ಪ್ರೇರೆಪಿಸಿದ್ದಾರೆ.

ಇದರಿಂದಾಗಿ ದರ್ಶನ್ ಅಭಿಮಾನಿಗಳಷ್ಟೆ ಅಲ್ಲದೆ, ಲಕ್ಷಾಂತರ ಮಂದಿ ದತ್ತು ಪ್ರಕ್ರಿಯೆಗೆ ಆಸಕ್ತಿ ತೋರಿಸಿದರು. ಏಕಕಾಲಕ್ಕೆ ಸಾಕಷ್ಟು ಮಂದಿ ಆ್ಯಪ್ ಗೆ ಪ್ರವೇಶಿಸಿದ್ದರಿಂದ ಒಟಿಪಿ ರವಾನೆಯಾಗದೆ ತಾಂತ್ರಿಕ ತೊಂದರೆಯೂ ಎದುರಾಗಿತ್ತು. ನಂತರ ಅದನ್ನು ಸರಿಪಡಿಸಲಾಗಿದೆ.
ದರ್ಶನ್ ಅವರ ಸಹಕಾರಕ್ಕೆ ಅರಣ್ಯ ಇಲಾಖೆ ಅಧೀನದಲ್ಲಿರುವ ಮೃಗಾಲಯ ಪ್ರಾಧಿಕಾರ ಧನ್ಯವಾದ ಹೇಳಿದೆ.

Facebook Comments