ಗಜ ಪಡೆಯೊಂದಿಗೆ ಸಾಗಿದ ವಿಂಟೇಜ್ ಕಾರುಗಳು

Elephant-Dasara

ಮೈಸೂರು,ಅ.1-ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಂಟೇಜ್ ಕಾರುಗಳು ಗಜಪಡೆಯೊಂದಿಗೆ ಸಾಗುವ ಮೂಲಕ ನೋಡುಗರ ಗಮನ ಸೆಳೆಯಿತು. ಮೈಸೂರು ಅರಮನೆ ಆವರಣದಿಂದ ಇಂದು ಬೆಳಗ್ಗೆ ಕಾರುಗಳೊಂದಿಗೆ ಅರ್ಜುನ ಮತ್ತು ತಂಡ ಹೆಜ್ಜೆ ಹಾಕಿದೆ.

ಅರಮನೆಯಿಂದ ಕೆ.ಆರ್.ವೃತ್ತದವರೆಗೂ ಗಜಪಡೆಗಳ ಹಿಂದೆ-ಮುಂದೆ ಐದು ಕಾರುಗಳು ಸಂಚರಿಸುವ ಮೂಲಕ ನೋಡುಗರ ಗಮನ ಸೆಳೆಯಿತು. ದಸರಾ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ರ್ಯಾಲಿಗೆ ಚಾಲನೆ ನೀಡಿದ್ದರು. ರ್ಯಾಲಿಯಲ್ಲಿ ಭಾಗವಹಿಸಿದ್ದ 50 ಕಾರುಗಳು ನಿನ್ನೆ ಸಂಜೆ ನಗರಕ್ಕೆ ಆಗಮಿಸಿದ್ದವು. ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮೈಸೂರಿಗರ ಗಮ ಸೆಳೆದಿತ್ತು.

ಬೆಳಗ್ಗೆ ಗಜಪಡೆಯೊಂದಿಗೆ ಕೆಲ ಕಾರುಗಳು ಸಂಚರಿಸುವ ಮೂಲಕ ದಸರಾ ಮೆರಗನ್ನು ಹೆಚ್ಚಿಸಿತು ಈ ಪೈಕಿ ಹಲವು ಕಾರುಗಳು ವಿದೇಶದಿಂದ ಬಂದಿದ್ದು ವಿದೇಶಿಗರು ಈ ಕಾರುಗಳನ್ನು ಚಲಾಯಿಸಿದ್ದು ವಿಶೇಷವಾಗಿತ್ತು.

Sri Raghav

Admin