ಯಶಸ್ವಿ ಜಂಬೂ ಸವಾರಿ ನಂತರ ಕಾಡಿನತ್ತ ಗಜಪಡೆ

Spread the love

ಮೈಸೂರು, ಅ.10-ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಯಶಸ್ವಿಗೆ ಕಾರಣವಾದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಇಂದು ಕಾಡಿಗೆ ತೆರಳಿತು. ನಿನ್ನೆ ಸಂಜೆಯೇ ದಸರಾ ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಜಯಪ್ರಕಾಶ ಆನೆಗಳನ್ನು ಹುಲಿ ಸೆರೆಗಾಗಿ ಕಳುಹಿಸಿಕೊಡಲಾಗಿತ್ತು. ಅರ್ಜುನ ಸೇರಿದಂತೆ ಉಳಿದ 10 ಆನೆಗಳನ್ನು ಸ್ವಸ್ಥಾನಗಳಿಗೆ ಲಾರಿಗಳ ಮೂಲಕ ಕಳುಹಿಸಲಾಯಿತು.

ಕಳೆದ ಒಂದೂವರೆ ತಿಂಗಳ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದವು. ಪ್ರತಿನಿತ್ಯ ಇವುಗಳಿಗೆ ತಾಲೀಮು ನೀಡಿ ಜಂಬೂ ಸವಾರಿಗೆ ಸಜ್ಜುಗೊಳಿಸಲಾಗಿತ್ತು. ಕಾಡಿನಲ್ಲೇ ಇರುವುದರಿಂದ ಆನೆಗಳು ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದರಿಂದ ಅವುಗಳನ್ನು ಪ್ರತಿನಿತ್ಯ ನಗರದ ಪ್ರಮುಖ ಜನನಿಬಿಡ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತಿತ್ತು.

ನಂತರ ಭಾರ ಹೊರುವ ತಾಲೀಮು ಕೊಡಲಾಗುತ್ತಿತ್ತು. ಇದೆಲ್ಲದರಿಂದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತು ಯಶಸ್ವಿಯಾಗಿ ಸಾಗಲು ಸಾಧ್ಯವಾಯಿತು.

Facebook Comments