ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ದುಬಾರಿ ಮೌಲ್ಯದ ದತ್ತಾಂಶ ಕಳವು ಶಂಕೆ

Social Share

ಬೆಂಗಳೂರು, ನ.17- ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಪಟ್ಟ ಹಗರಣ ಬೆಳಕಿಗೆ ಬರುತ್ತಿದ್ದಂತೆ ಬಿಬಿಎಂಪಿ ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾಗಿದೆ.

ಚಿಲುಮೆ ಸಂಸ್ಥೆ ಚುನಾವಣಾ ಆಯೋಗ, ಸರ್ಕಾರ ಅಥವಾ ಬಿಬಿಎಂಪಿಯಿಂದ ಯಾವುದೇ ಆರ್ಥಿಕ ನೆರವು ಪಡೆಯದೇ ಮತದಾರರ ಜಾಗೃತಿ ಮೂಡಿಸುವುದಾಗಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದಾಗಿ ಪ್ರಸ್ತಾವನೆ ಸಲ್ಲಿಸಿದೆ. ಬಿಬಿಎಂಪಿ ಅದಕ್ಕೆ ಅನುಮತಿಯನ್ನು ನೀಡಿದೆ. 2019ರಿಂದಲೂ ಆಯೋಗ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.

ಆದರೆ ಚುನಾವಣಾ ಆಯೋಗ ಇಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಬಿಬಿಎಂಪಿ ಜಿಲ್ಲಾ ಚುನಾವಣಾಕಾರಿ ಮತದಾರರ ಮಾಹಿತಿ ಸಂಗ್ರಹಿಸಲು ಯಾವುದೇ ಸಂಸ್ಥೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತದಾರರ ಜಾಗೃತಿಗೆ ಚುಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು, ನಿಯಮ ಉಲ್ಲಂಘನೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಅನುಮತಿಯನ್ನು ರದ್ದು ಪಡಿಸಿರುವುದಾಗಿ ಆಯೋಗ ತಿಳಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿಕೆ ನೀಡಿ ದೃಢಪಡಿಸಿದ್ದಾರೆ. ಆಯೋಗ ದತ್ತಾಂಶ ಸಂಗ್ರಹಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ಮೂಲಕ ಎಲ್ಲವನ್ನೂ ಗೊಂದಲ ಮಾಡಲು ಪ್ರಯತ್ನ ನಡೆದಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿಯನ್ನು ಸರ್ಕಾರಿ ಅಥವಾ ಅರೆ ಸರ್ಕಾರಿ ಅಧಿಕಾರಿಗಳೇ ನಿಭಾಯಿಸಬೇಕು ಎಂಬ ಸ್ಪಷ್ಟ ನಿಯಮ ಇದೆ. ಆದರೂ ಚಿಲುಮೆ ಸಂಸ್ಥೆಯವರು ತಾವು ನೇಮಿಸಿಕೊಂಡ ಸಿಬ್ಬಂದಿಗಳಿಗೆ ಮತಗಟ್ಟೆ ಅಧಿಕಾರಿ ಎಂದು ಗುರುತಿನ ಕಾರ್ಡ್ ನೀಡಿದ್ದಾರೆ.

ಈ ರೀತಿ ನೇಮಕವಾದ ಸಮೀಕ್ಷೆದಾರರು ಮನೆ ಮನೆಗೆ ತೆರಳಿ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಈ ದತ್ತಾಂಶ ಸಂಗ್ರಹವನ್ನು ಕಳ್ಳತನವಾಗಿದೆ ಎಂದು ಕಾಂಗ್ರೆಸ್ ದೂರು ನೀಡಿದೆ. ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ.

ಉಮೇಶ್ ಕತ್ತಿ, ಆನಂದ ಮಾಮನಿ ಕ್ಷೇತ್ರಗಳಿಗೆ ಅಭ್ಯರ್ಥಿಗಳಿಲ್ಲದೆ ಹೆಣಗಾಡುತ್ತಿರುವ ಬಿಜೆಪಿ

ಅಂತರ್ಜಾಲದಲ್ಲಿ ದತ್ತಾಂಶವನ್ನು ಚಿನ್ನದ ಗಣಿ ಎಂದು ಕರೆಯಲಾಗುತ್ತಿದೆ. ಚುನಾವಣೆ ಆಯೋಗದ ಮೂಲಕ ಸಂಗ್ರಹಿಸುವ ಮಾಹಿತಿ ಇನ್ನೂ ಕರಾರುವಕ್ಕಾಗಿದ್ದು, ಅದಕ್ಕೆ ವಜ್ರದ ಮೌಲ್ಯ ಇರುತ್ತದೆ. ಹಾಗಾಗಿ ಖಾಸಗಿ ಸಂಸ್ಥೆ ಸರ್ಕಾರದಿಂದ ಯಾವುದೇ ನೆರವು ಇಲ್ಲದಿದ್ದರೂ ಉಚಿತವಾಗಿ ಜಾಗೃತಿ ಅಭಿಯಾನ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಡಲು ಒಪ್ಪಿಕೊಂಡಿತ್ತು ಎಂದು ದೂರಲಾಗಿದೆ.

Articles You Might Like

Share This Article