ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ

Social Share


ಚಿಕ್ಕಮಗಳೂರು, ನ.13- ಶ್ರೀರಾಮ ಸೇನೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿತು. ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶಂಕರಮಠದಿಂದ ಆರಂಭ ವಾದ ಶೋಭಾ ಯಾತ್ರೆ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್‍ನಲ್ಲಿ

ಅಂತ್ಯಗೊಂಡಿತು. ಶೋಭಾಯಾತ್ರೆಗೆ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಕೋಲಾರ, ಮಡಿಕೇರಿ ಇನ್ನಿತರ ಕಡೆಗಳಿಂದ ಶ್ರೀರಾಮ ಸೇನೆಯ ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು.

ಶೋಭಾ ಯಾತ್ರೆಯಲ್ಲಿ ದತ್ತ ವಿಗ್ರಹ ಇಟ್ಟು, ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ದತ್ತ ಮಾಲಾಧಾರಿಗಳಿಂದ ಜಯಕಾರದ ಘೋಷಣೆ ದಾರಿಯುದ್ದಕ್ಕೂ ಮೊಳಗಿದವು. ಶಂಕರ ಮಠದ ಮುಂಭಾಗ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು.

ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

ಸಭೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರ ಹಿಂದೂ ರಾಷ್ಟ್ರ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಧನಂಜಯ್ ದೇಸಾಯಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಯೋಗಿ ರಂಜಿತ್ ಸುವರ್ಣ ಹಾಗೂ ಜಿಲ್ಲಾ ಸಂಚಾಲಕ ರಂಜಿತ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡು ದತ್ತಮಾಲಾ ಅಭಿಯಾನದ ಮಹತ್ವವನ್ನು ಪ್ರತಿಪಾದಿಸಿದರು.

ಧಾರ್ಮಿಕ ಸಭೆಯ ನಂತರ ಆಜಾದ್ ಪಾರ್ಕ್‍ನಿಂದ ವಿವಿಧ ವಾಹನಗಳಲ್ಲಿ ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು ತೆರಳಿದರು. ಜಿಲ್ಲಾಡಳಿತ ನಿರ್ಮಿಸಿರುವ ಬ್ಯಾರಿಕೇಡ್ ಮೂಲಕ ಮಾಲಾಧಾರಿಗಳು ದತ್ತ ಗುಹೆ ಪ್ರವೇಶ ಮಾಡಿ ದತ್ತ ಪಾದುಕೆಗಳ ದರ್ಶನ ಪಡೆದರು.

ವಿಶೇಷ ಬಸ್‍ನಲ್ಲಿ ಕೋಲಾರಕ್ಕೆ ಬಂದ ಸಿದ್ದರಾಮಯ್ಯ

ದತ್ತಪೀಠದಲ್ಲಿ ವಿವಾದಿತ ಸ್ಥಳದಿಂದ 400 ಮೀಟರ್ ದೂರದಲ್ಲಿ ಧಾರ್ಮಿಕ ಸಭೆ ನಡೆದು ನಂತರ ತಾತ್ಕಾಲಿಕ ಶೆಡ್‍ನಲ್ಲಿ ಗಣ ಹೋಮ ದತ್ತ ಹೋಮದ ನಡುವೆ ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತ ತೆರೆ ಬಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬ ಏರ್ಪಡಿಸಲಾಗಿತ್ತು.

Articles You Might Like

Share This Article