ನವದೆಹಲಿ, ಫೆ. 21- ಭಾರತ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅವರು ಬಾರ್ಡರ್- ಗವಾಸ್ಕರ್ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ವೇಳೆ ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‍ನಲ್ಲಿ ಮೊಣಕೈಗೆ ಗಾಯ ಮಾಡಿಕೊಂಡಿದ್ದ ವಾರ್ನರ್, ಮತ್ತೊಬ್ಬ ವೇಗಿ ಮೊಹಮ್ಮದ ಶಮಿ ಎಸೆತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿ ದ್ದರು. ಗಾಯದ ಸ್ವರೂಪ ಅತಿಯಾಗಿ ದ್ದರಿಂದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‍ನಲ್ಲಿ ಬ್ಯಾಟಿಂಗ್ ಮಾಡುವಾಗ ಡಗೌಟ್‍ನಲ್ಲಿ ಕುಳಿತು ವಿಶ್ರಾಂತಿ ಪಡೆದಿದ್ದರು.
ಅರ್ಕಾವತಿ ಭೂ ಸ್ವಾದೀನ ವಿವಾದ : ಮೇಲ್ಮನೆಯಲ್ಲಿ ಕೋಲಾಹಲ
ಡೇವಿಡ್ ವಾರ್ನರ್ ಬದಲಿಗೆ ಪಂದ್ಯದಲ್ಲಿ ಸ್ಥಾನ ಪಡೆಯದಿದ್ದ ಮ್ಯಾಟ್ ರನ್‍ಸಾ ಅವರು ವಾರ್ನರ್ ಬದಲಿಗೆ ಫೀಲ್ಡಿಂಗ್‍ನಲ್ಲಿ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಗಿರುವ ಗಾಯದ ಸ್ವರೂಪ ಗಂಭೀರವಾಗಿರುವುದರಿಂದ ಬಾರ್ಡರ್- ಗವಾಸ್ಕರಂ ಸರಣಿಯಲ್ಲಿ ನಡೆಯಲಿರುವ ಉಳಿದೆರಡು ಟೆಸ್ಟ್ ಪಂದ್ಯಗಳಿಂದ ಅವರು ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ
ಡೇವಿಡ್ ವಾರ್ನರ್ ಅವರು ಆಸ್ಟ್ರೇಲಿಯಾ ಪುನಶ್ಚೇತನ ಕೇಂದ್ರದಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದು ಒಂದು ವೇಳೆ ಭಾರತ ವಿರುದ್ಧದ ಏಕದಿನ ಸರಣಿ ವೇಳೆ ಫಿಟ್ನೆಸ್ ಪಡೆದರೆ ಮಾರ್ಚ್ 17 ರಿಂದ 22ರವರೆಗೆ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವಾರ್ನರ್‍ಗೆ ಸ್ಥಾನ ಕಲ್ಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
David Warner, out, final, two, India, Tests, elbow fracture,