ರಶ್ಮಿಕಾ ಮಂದಣ್ಣರ ಕ್ಷಮೆಯಾಚಿಸಿದ ಡೇವಿಡ್ ವಾರ್ನರ್..!

Social Share

ನವದೆಹಲಿ, ನ. 16- ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರು, ಕೊಡಗಿನ , ನಟಿ ರಶ್ಮಿಕಾ ಮಂದಣ್ಣರವರ ಬಳಿ ಕ್ಷಮೆ ಯಾಚಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅರೆ.. ವಾರ್ನರ್, ನಿಜ ವಾಗಿಯೂ ರಶ್ಮಿಕಾರ ಬಳಿ ಕ್ಷಮೆಯಾಚಿಸಿದರೆ, ಅವರೇನೂ ತಪ್ಪು ಮಾಡಿದರೂ ಎಂದು ಕೊಂಡೀರಾ…! ಆಗಿದ್ದಿಷ್ಟು.

ವಾಟೇ ಬ್ಯೂಟಿ': ಐ ಯಾಮ್ ಸ್ವಾರಿ: ವಾರ್ನರ್ ಅವರು ನೇರವಾಗಿ ರಶ್ಮಿಕಾ ಬಳಿ ಕ್ಷಮೆ ಕೇಳಿಲ್ಲ, ಬದಲಿಗೆ ಅಲ್ಲುಅರ್ಜುನ್ ಹಾಗೂ ಕೊಡಗಿನ ಕುವರಿ ನಟಿಸಿದ್ದ ಖ್ಯಾತ ಸಿನಿಮಾಪುಷ್ಪ’ದಲ್ಲಿ ರಶ್ಮಿಕಾ ನಟಿಸಿದ್ದ ವಾಟೇ ಬ್ಯೂಟಿ' ಎಂಬ ಗೀತೆಯಲ್ಲಿ ನಟಿಸಿದ್ದ ಮಂದಣ್ಣರ ಮುಖವನ್ನು ಮಾರ್ಫಿಂಗ್ ಮಾಡಿರುವ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು, ಮಂದಣ್ಣ ಮುಖಕ್ಕೆ, ತಮ್ಮ ಮುಖವನ್ನು ಅಂಟಿಸಿ ಫನ್ನಿ ವಿಡಿಯೋ ಮಾಡಿದ್ದು, ಅದಕ್ಕೆ ಸೋ ಸ್ವಾರಿ ಫರ್ ದಿಸ್ ಒನ್’ ಎಂದು ಸುಂದರ ಅಡಿಬರಹವನ್ನು ಕೊಡುವ ಮೂಲಕ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.

ಚುನಾವಣೆಯಲ್ಲಿ ಗೆಲವು ಕಷ್ಟವಾಗಬಹುದು : ಸಿದ್ದರಾಮಯ್ಯಗೆ ಮುನಿಯಪ್ಪ ಎಚ್ಚರಿಕೆ

ಸಖತ್ ರೆಸ್ಪಾನ್ಸ್:
ಡೇವಿಡ್ ವಾರ್ನರ್ ಹರಿ ಬಿಟ್ಟಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷಗೊಂಡ ನಂತರ ವಾರ್ನರ್ರ ಅಭಿಮಾನಿಗಳು ಅದನ್ನು ಮೆಚ್ಚಿಕೊಂಡು ಲೈಕ್ ಮಾಡುವುದರೊಂದಿಗೆ ಅನೇಕ ರೀತಿಯಲ್ಲಿ ಕಾಮೆಂಟ್ಸ್ಗಳನ್ನು ಕೊಟ್ಟು ಪ್ರತಿಕ್ರಿಯಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕೂಡ ಇನ್ಸ್ಟಾಗ್ರಾಂ ನಲ್ಲಿ ಬ್ಯೂಸಿ ಆಗಿದ್ದು, ಡೇವಿಡ್ ಹರಿಬಿಟ್ಟಿರುವ ಫನ್ನಿ ವಿಡಿಯೋಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡ ಬೇಕು.

ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ : ಮೋದಿ

ತಗ್ಗದೆ ಲೇದು:
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣರ ಪುಷ್ಪ' ಸಿನಿಮಾದ ತಗ್ಗದೆ ಲೇದು ಡೈಲಾಗ್ ಅನ್ನು ವಾರ್ನರ್ ಮೈದಾನದಲ್ಲೇ ಮಾಡಿ ತೋರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಈಗ ರಶ್ಮಿಕಾ ಮಂದಣ್ಣ ಸಖತ್ ಸ್ಟೆಪ್ಸ್ ಹಾಕಿರುವವಾಟೇ ಬ್ಯೂಟಿ’ ಹಾಡಿನಲ್ಲಿ ರಶ್ಮಿಕಾಳ ಮುಖಕ್ಕೆ ಮಾರ್ಫಿಂಗ್ ಮೂಲಕ ತಮ್ಮ ಮುಖ ಜೋಡಿಸಿ ಫನ್ನಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ತಮಗೆ ಆ ಚಿತ್ರದ ಬಗ್ಗೆ ಇರುವ ಅಪಾರ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

Articles You Might Like

Share This Article