ಭಾರತದ 6 ನಗರಗಳಲ್ಲಿ ವಿಧ್ವಂಸಕ ಕೃತ್ಯ ದಾವೋದ್ ಸಂಚು

Social Share

ನವದೆಹಲಿ,ನ.8-ವಿಶ್ವದ ಅಪಾಯಕಾರಿ ಭಯೋತ್ಪಾದಕ ದಾವೋದ್ ಇಬ್ರಾಹಿಂ ಭಾರತದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿರುವುದು ಕೇಂದ್ರ ಗುಪ್ತಚರ ವಿಭಾಗ ಪತ್ತೆ ಮಾಡಿದೆ. ಡಿಕಂಪನಿ ಮೂಲಕ ದಾವೂದ್ ಇಬ್ರಾಹಿಂ ಭಾರತದ 6 ನಗರಗಳಲ್ಲಿ ಉಗ್ರರರಿಂದ ವಿಧ್ವಂಸಕ ಕೃತ್ಯ ನಡೆಸಲು ಭಾರೀ ಮೊತ್ತದ ಹಣ ಹೂಡಿಕೆ ಮಾಡಿದ್ದಾನೆ ಎಂದು ಎನ್‍ಐಎ ತಿಳಿಸಿದೆ.

ಈ ಹಿಂದೆ ಮುಂಬೈನಲ್ಲಿ ನಡೆಸಿದ ಮಾರಣಹೋಮದಂತೆ ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ದಾವೂದ್ ಕಡೆಯ ಉಗ್ರರು ಸಜ್ಜಾಗಿದ್ದಾರೆ. ವಿಶೇಷವಾಗಿ ರಾಜಕಾರಣಿಗಳು, ಉದ್ಯಮಿಗಳು, ಚಿತ್ರರಂಗದ ಗಣ್ಯರು, ವಿಜ್ಞಾನಿಗಳು ಇವರ ಹಿಟ್‍ಲಿಸ್ಟ್‍ನಲ್ಲಿದ್ದಾರೆ ಎಂದು ಹೇಳಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಓವೈಸಿ ಮನವಿ

ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಕೂಡ ಭಾರತದಲ್ಲಿ ದಾಳಿ ನಡೆಸಲು ಆಯ್ದ ಉಗ್ರರಿಗೆ ಭಾರೀ ಮೊತ್ತದ ಹಣ ನೀಡಿದ್ದಾನೆ. ಈಗಾಗಲೇ ಬಂಧಿತರಾಗಿರುವ ಆರೀಫ್ ಅಬುಬಕರ್ ಶೇಖ್, ಶಬ್ಬೀರ್ ಅಬುಬಕರ್ ಶೇಖ್ ಮತ್ತು ಮೊಹಮ್ಮದ್ ಸಲೀಂ ಖುರೇಷಿ ತನಿಖಾ ವೇಳೆ ಕೆಲವು ಆಘಾತಕಾರಿ ಅಂಶಗಳನ್ನು ಹೊರ ಹಾಕಿದೆ.

ಮಧ್ಯ ಪ್ರದೇಶದಲ್ಲಿ ಹಂದಿಜ್ವರಕ್ಕೆ 85 ಹಂದಿಗಳು ಸಾವು

ಹವಾಲಾ ಮೂಲಕ ದುಬೈನಿಂದ ಹಣ ಉಗ್ರರಿಗೆ ತಲುಪಿದೆ. ಪ್ರಮುಖ ನಗರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಬೇಕೆಂದು ಎನ್‍ಐಎ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿದೆ.

Articles You Might Like

Share This Article