ಬೆಂಗಳೂರು, ಜೂ.19– ಡಿಸಿಇಟಿ-2025 ಪರೀಕ್ಷೆ ಬರೆದಿದ್ದ ಹೊರನಾಡು, ಗಡಿನಾಡು ಕನ್ನಡಿಗರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಿನ್ನೆ ಕನ್ನಡ ಭಾಷಾ ಪರೀಕ್ಷೆ ನಡೆದು ಒಂದು ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಲಾಗಿದೆ.
ಪರೀಕ್ಷೆ ತೆಗೆದುಕೊಂಡಿದ್ದ 27 ಅಭ್ಯರ್ಥಿಗಳ ಪೈಕಿ ಪರೀಕ್ಷೆಗೆ ಹಾಜರಾಗಿದ್ದು ಕೇವಲ ಏಳು ಮಂದಿ ಮಾತ್ರ. ಅವರಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದು ಉಳಿದ ಆರು ಮಂದಿ ಅರ್ಹರಾಗಿದ್ದಾರೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಒಟ್ಟು 50 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 12 ಅಂಕ ಪಡೆದವರು ಮಾತ್ರ ಈ ಕೋಟಾದಡಿ ಸೀಟು ಪಡೆಯಲು ಅರ್ಹರಾಗುತ್ತಾರೆ. ಆದರೆ ಏಳು ಮಂದಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ 10 ಅಂಕ ಪಡೆದು ಅನರ್ಹರಾಗಿದ್ದಾರೆ ಎಂದು ಹೇಳಿದೆ.
ಬಿಪಿಟಿ, ಬಿಪಿಒ, ಎಎಚ್‌ಎಸ್ ಕೋರ್ಸ್‌ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರ್ಯಾಂಕ್ ಪ್ರಕಟಿಸಿದೆ.
ಯುಜಿಸಿಇಟಿ ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ ರ್ಯಾಂಕ್ ನೀಡಲಾಗಿದೆ.
ಬಿಪಿಟಿ ಮತ್ತು ಎಎಚ್‌ಎಸ್ ಕೋರ್ಸ್‌ಗಳಿಗೆ ವಿಜ್ಞಾನ ಮತ್ತು ಬಿಪಿಒ ಕೋರ್ಸ್‌ಗಳ ಪ್ರವೇಶಕ್ಕೆ ಕಲಾ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಶಿಕ್ಷಣ ಮುಗಿಸಿರುವವರು ಕೂಡ ಅರ್ಹರು ಎಂದು ಪ್ರಾಧಿಕಾರ ತಿಳಿಸಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-07-2025)
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ